ಮೈಸೂರು : ಭಾರಿ ಮಳೆಗೆ ಕಾಂಗ್ರೆಸ್ ಮುಖಂಡನ ಮನೆ ಕುಸಿತ

Update: 2018-06-04 16:08 GMT

ಮೈಸೂರು,ಜೂ.4: ಮೈಸೂರಿನಲ್ಲಿ ಬಿದ್ದ ಭಾರೀ ಮಳೆಗೆ ಕಾಂಗ್ರೆಸ್ ನ  ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈರೋಜ್ ಖಾನ್ ಎಂಬವರಿಗೆ ಸೇರಿದ ಎರಡಂತಸ್ತಿನ ಮನೆ ಕುಸಿದು ಬಿದ್ದ ಘಟನೆ ನಡೆದಿದೆ.

ಮನೆಯಲ್ಲಿ ಮೂರು ಸಂಸಾರಗಳು ವಾಸವಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಡೆ ಬಿರುಕು ಬಿಡುತ್ತಿದ್ದಂತೆಯೇ ನಿವಾಸಿಗಳು ಮನೆಯಿಂದ ಹೊರ ಬಂದಿದ್ದಾರೆ. ಮೈಸೂರು ಉದಯಗಿರಿಯ ಗೌಸಿಯಾ ನಗರದ 'ಎ' ಬ್ಲಾಕ್ ನಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣಗಳು ನಾಶಗೊಂಡಿವೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News