ಹನೂರು: ಸಮರ್ಪಕ ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ

Update: 2018-06-05 16:51 GMT

ಹನೂರು: ಹನೂರು ಪಟ್ಟಣದ ಹೊರ ವಲಯದ ಬಂಡಳ್ಳಿ ರಸ್ತೆಯಲ್ಲಿರುವ ಸ್ವಾಮಿಹಳ್ಳ ಸೇರಿದಂತೆ ಅನೇಕ ಹಳ್ಳಗಳಲ್ಲಿರುವ ಸೇತುವೆಗಳ ಮೇಲೆ ಮಳೆಗಾಲದಲ್ಲಿ ರಭಸವಾಗಿ ಮಳೆ ನೀರು ಹರಿಯುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಆತಂಕದಿಂದ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ .

ಕ್ಷೇತ್ರ ವ್ಯಾಪ್ತಿಯ ಬಂಡಳ್ಳಿ, ಶಾಗ್ಯ, ಹಲಗಾಪುರ, ತೋಮಿಯರ್‍ಪಾಳ್ಯ, ಮಣ್ಣಗಳ್ಳಿ, ಚಿಂಚಳ್ಳಿ ಸೇರಿದಂತೆ ಇನ್ನಿತರರ ಗ್ರಾಮಸ್ಥರು ತಾಲೂಕು ಕೇಂದ್ರವಾದ ಹನೂರು ಪಟ್ಟಣಕ್ಕೆ ಆಗಮಿಸಬೇಕಾದರೆ ಈ ಎರಡು ಮೂರು ಹಳ್ಳಗಳ ಸೇತುವೆಗಳ ಮುಖಾಂತರವೇ ಸಂಚರಿಸಬೇಕಾಗುತ್ತದೆ. ಈ ಸೇತುವೆಗಳು ತುಂಬಾ ಕೆಳಮಟ್ಟದಲ್ಲಿದ್ದು, ಕಿರಿದಾಗಿದೆ. ಗ್ರಾಮಸ್ಥರು ಇದರಲ್ಲಿಯೇ ಸಂಚರಿಸುವ ಸ್ಥಿತಿ ಅನಿವಾರ್ಯತೆಯಿದೆ.

ಮಳೆಗಾಳದಲ್ಲಂತೂ ಸೇತುವೆಯ ಮೇಲೆ ರಭಸವಾಗಿ ನೀರು ಹರಿದು ಸಂಚಾರಕ್ಕೆ ಅಡಚಣೆ ಆಗುತ್ತದೆ. ಇದರಿಂದ ಹನೂರು ಪಟ್ಟಣದ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರು, ಸವಾರರಿಗೆ ಇಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಈ ಎಲ್ಲಾ ಸೇತುವೆಗಳನ್ನು ಮೇಲ್ದರ್ಜೆಗೇರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News