ಯಾವ ಬಾಲ್ ಹಾಕಿದರೂ ಬ್ಯಾಟ್ ಮಾಡುತ್ತೇನೆ : ಯುಟಿ ಖಾದರ್

Update: 2018-06-06 05:53 GMT

ಬೆಂಗಳೂರು, ಜೂ.6: ಯಾವ ಬಾಲ್ ಹಾಕಿದರೂ ಬ್ಯಾಟ್ ಮಾಡುತ್ತೇನೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಯು.ಟಿ.ಖಾದರ್ ಅವರನ್ನು ಬೆಂಗಳೂರಿನಲ್ಲಿ ಸುದ್ದಿಗಾರರು ಭೇಟಿಯಾಗಿ  ನಿಮಗೆ ಯಾವ ಖಾತೆ ಸಿಗಬಹುದೆಂದು ಪ್ರಶ್ನಿಸಿದಾಗ ಈ ರೀತಿ ಉತ್ತರಿಸಿದರು.

ಯಾವುದೇ ಖಾತೆ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ಎಂದು ಹೇಳಿದ ಯುಟಿ ಖಾದರ್ ತಮಗೆ ಯಾವ ಖಾತೆ ಸಿಗಬಹುದೆಂಬ ಗುಟ್ಟನ್ನು ಬಿಟ್ಟು ಕೊಡಲಿಲ್ಲ.   ಈ ಹಿಂದೆ ಸಿದ್ದರಾಮಯ್ಯ ಸಚಿವ ಸಚಿವ ಸಂಪುಟದಲ್ಲಿ ಯುಟಿ ಖಾದರ್ ಆರೋಗ್ಯ, ಆಹಾರ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News