ಸಚಿವ ಸಂಪುಟ: ಕಾಂಗ್ರೆಸ್ ಪಟ್ಟಿಯಲ್ಲಿ ‘ಅಚ್ಚರಿಯ ಆಯ್ಕೆ’ಯಾದ ಪ್ರಸಿದ್ಧ ಕಲಾವಿದೆ

Update: 2018-06-06 07:41 GMT

ಬೆಂಗಳೂರು, ಜೂ.6  ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಸೂತನ ಸಚಿವರುಗಳಾಗಿ ಅವಕಾಶ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್ ನ 15 ಮತ್ತು ಮತ್ತು ಜೆಡಿಎಸ್ ನ 8 ಶಾಸಕರ ಪಟ್ಟಿ ರಾಜ್ಯಪಾಲರಿಗೆ ರವಾನೆಯಾಗಿದೆ.

ಕಾಂಗ್ರೆಸ್ ಪಟ್ಟಿಯಲ್ಲಿ ಅಚ್ಚರಿಯೆಂಬಂತೆ ಜಯಮಾಲಾ ಅವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದುವರೆಗಿನ ಬೆಳವಣಿಗೆಗಳಲ್ಲಿ ಜಯಮಾಲಾ ಅವರ ಹೆಸರು ಯಾವುದೇ ಸಂಭಾವ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ಆದರೆ ಕೊನೆ ಕ್ಷಣದಲ್ಲಿ ಜಯಮಾಲಾ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್ ನ  ಪಟ್ಟಿಯಲ್ಲಿರುವವರು

ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ , ಕೆ.ಜೆ. ಜಾರ್ಜ್, ಯು.ಟಿ.ಖಾದರ್ , ಪ್ರಿಯಾಂಕ್ ಖರ್ಗೆ, ಝಮೀರ್ ಅಹ್ಮದ್ ಖಾನ್  ,ಕೃಷ್ಣ ಭೈರೇ ಗೌಡ, ಹೆಚ್ ಕೆ ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ,ಜಯಮಾಲಾ,  ರಾಜಶೇಖರ್ ಪಾಟೀಲ್, ಶಿವಾನಂದ್ ಪಾಟೀಲ್, ಪುಟ್ಟರಂಗ ಶೆಟ್ಟಿ, ಶಿವಶಂಕರ ರೆಡ್ಡಿ, ಶಂಕರ್,  ಮತ್ತಿತರರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ .

ಜೆಡಿಎಸ್

ಹೆಚ್ ಡಿ ರೇವಣ್ಣ.  ಬಂಡೆಪ್ಪ ಕಾಶೆಂಪುರ, ಜೆ.ಟಿ.ದೇವೇಗೌಡ, ಹೆಚ್ ಕೆ.ಕುಮಾರಸ್ವಾಮಿ, ಪುಟ್ಟರಾಜು, ಸಾರಾ ಮಹೇಶ್ , ಸಿ.ಎಸ್.ಪುಟ್ಟರಾಜು, ವೆಂಕಟ್ ರಾವ್ ನಾಡೇಗೌಡ,  ಬಿಎಸ್‌ಪಿಯಿಂದ ಕೊಳ್ಳೇಗಾಲ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಎನ್. ಮಹೇಶ್‌ಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News