ರೇವಣ್ಣರಿಗೆ ತಪ್ಪಿದ ಇಂಧನ ಖಾತೆ?

Update: 2018-06-06 08:17 GMT

ಬೆಂಗಳೂರು, ಜೂ.6: ಸಮ್ಮಿಶ್ರ ಸರಕಾರದಲ್ಲಿ ಎರಡು ಖಾತೆಗಳಿಗೆ ಪಟ್ಟು ಹಿಡಿದಿದ್ದ ಮುಖ್ಯ ಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಸಹೋದರ ಎಚ್ ಡಿ ರೇವಣ್ಣ ರಿಗೆ ಕೇವಲ ಒಂದು ಖಾತೆ ಸಿಕ್ಕಿದೆ.

ರೇವಣ್ಣ  ಲೋಕೋಪಯೋಗಿ ಮತ್ತು ಇಂಧನ ಖಾತೆ ಬೇಕೆಂದು ಪಟ್ಟು  ಹಿಡಿದಿದ್ದರು. ಆದರೆ ಅವರ ಮನವೊಲಿಸುವಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇ ಗೌಡ ಯಶಸ್ವಿಯಾಗಿದ್ದಾರೆ.

ಹೆಚ್ ಡಿ ರೇವಣ್ಣರಿಗೆ ಲೋಕೋಪಯೋಗಿ ಖಾತೆಯನ್ನು ಮಾತ್ರ ನೀಡಿರುವ ಸಿಎಂ ಕುಮಾರಸ್ವಾಮಿ ಅವರು ಇಂಧನ ಖಾತೆಯನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News