ಟೆನಿಸ್ ದಂತಕಥೆ ಮರಿಯಾ ಬ್ಯೂನೊ ಇನ್ನಿಲ್ಲ

Update: 2018-06-09 04:23 GMT

ಸಾವೊ ಪೋಲೊ, ಜೂ.9: ಬ್ರೆಝಿಲ್‌ನ ಖ್ಯಾತ ಟೆನಿಸ್ ಪಟು ಮರಿಯಾ ಬ್ಯೂನೊ ಅವರು ಬಾಯಿ ಕ್ಯಾನ್ಸರ್ ಜತೆಗೆ ಸುದೀರ್ಘ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಆದರೆ ಬ್ಯೂನೊ ಕುಟುಂಬದ ಗೌರವ ಉಳಿಸುವ ಸಲುವಾಗಿ ಅವರ ಸಾವಿನ ಬಗೆಗಿನ ಯಾವುದೇ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಮೂಲಗಳು ಹೇಳಿವೆ.

ಬ್ಯೂನೊ ಮೂರು ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಹಾಗೂ ನಾಲ್ಕು ಯುಎಸ್ ಓಪನ್ ಪ್ರಶಸ್ತಿಗಳನ್ನು 1950 ಹಾಗೂ 1960ರ ದಶಕದಲ್ಲಿ ಗಳಿಸಿದ್ದರು. ಟೆನಿಸ್ ಬಲ್ಲೇರಿನಾ ಎಂದೇ ಖ್ಯಾತರಾಗಿದ್ದ ಅವರು, ವಿಶ್ವದ ಅಗ್ರ ರ್ಯಾಂಕಿಂಗ್ ಪಟ್ಟವನ್ನೂ ಅಲಂಕರಿಸಿದ್ದರು.

ಒಟ್ಟು 19 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದ ಅವರು, 1959ರಿಂದ 1966ರವರೆಗೆ ಏಳು ಸಿಂಗಲ್ಸ್, ಹನ್ನೊಂದು ಡಬಲ್ಸ್ ಹಾಗೂ ಒಂದು ಮಿಶ್ರ ಡಬಲ್ಸ್ ಪ್ರಶಸ್ತಿಗೆ ಭಾಜನರಾಗಿದ್ದರು. ಆಸ್ಟ್ರೇಲಿಯನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಕೂಡಾ ಸಿಂಗಲ್ಸ್ ಫೈನಲ್ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News