ಜಾಗತಿಕ ಚೆಸ್ ನ ಅಗ್ರ 10ರ ಗುಂಪಿಗೆ ಗುಕೇಶ್, ಅರ್ಜುನ್ ಸೇರ್ಪಡೆ

Update: 2024-05-02 16:22 GMT

ಗುಕೇಶ್ ( PTI ) | ಅರ್ಜುನ್ (Arjun Erigaisi/X)

ಹೊಸದಿಲ್ಲಿ: ಹದಿಹರಯದ ಭಾರತೀಯ ಗ್ರಾಂಡ್ಮಾಸ್ಟರ್ ಡಿ. ಗುಕೇಶ್ ಜಾಗತಿಕ ಅಗ್ರ 10 ಚೆಸ್ ಆಟಗಾರರ ಕ್ಲಬ್ಗೆ ಸೇರ್ಪಡೆಗೊಂಡಿದ್ದಾರೆ. 2,763 ಇಎಲ್ಒ ರೇಟಿಂಗ್ನೊಂದಿಗೆ, ಓಪನ್ ವಿಭಾಗದಲ್ಲಿ ಅವರು ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೂಲಕ, ಏಳನೇ ಸ್ಥಾನ ಹೊಂದಿರುವ ವಿಶ್ವ ಚೆಸ್ ಚಾಂಪಿಯನ್ ಚೀನಾದ ಗ್ರಾಂಡ್ ಮಾಸ್ಟರ್ ಡಿಂಗ್ ಲಿರೆನ್ಗಿಂತ ಮುಂದಿದ್ದಾರೆ.

ಅದೇ ವೇಳೆ, ಇನ್ನೋರ್ವ ಭಾರತೀಯ ಚೆಸ್ ಪ್ರತಿಭೆ ಗ್ರಾಂಡ್ ಮಾಸ್ಟರ್ ಅರ್ಜುನ್ ಎರಿಗಸಿ 2,761 ರೇಟಿಂಗ್ ಅಂಕಗಳೊಂದಿಗೆ ಎಂಟನೇ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗೆ ಕೆನಡದಲ್ಲಿ ನಡೆದ ಫಿಡೆ ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ವಿಜೇತರಾದ ಬಳಿಕ ಗುಕೇಶ್ 20 ಅಂಕಗಳನ್ನು ಗಳಿಸಿದ್ದಾರೆ ಎಂದು ಅಂತರ್ರಾಷ್ಟ್ರೀಯ ಚೆಸ್ ಫೆಡರೇಶನ್ (ಫಿಡೆ) ತಿಳಿಸಿದೆ.

ಕ್ಯಾಂಡಿಡೇಟ್ಸ್ ಪಂದ್ಯಾವಳಿಯನ್ನು ಗೆದ್ದ ಬಳಿಕ, ಗುಕೇಶ್ ಈಗ ವಿಶ್ವ ಚೆಸ್ ಚಾಂಪಿಯನ್ಶಿಪ್ ಮೇಲೆ ಕಣ್ಣಿಟ್ಟಿದ್ದಾರೆ.

ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯ ಮೊದಲು ಗುಕೇಶ್ ಜಾಗತಿಕ ಚೆಸ್ನಲ್ಲಿ 16ನೇ ಸ್ಥಾನ ಹೊಂದಿದ್ದರು. ಈಗ ಆರನೇ ಸ್ಥಾನಕ್ಕೆ ಜಿಗಿಯುವ ಮೂಲಕ ಬೃಹತ್ ಸಾಧನೆಗೈದಿದ್ದಾರೆ.

ಇಬ್ಬರು ಭಾರತೀಯರು ಜಾಗತಿಕ ಚೆಸ್ನ ಅಗ್ರ 10ರಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲ ಬಾರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News