ಹನೂರು: ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಗಾರ ಶಿಬಿರ, ಜಾಗೃತಿ ಕಾರ್ಯಕ್ರಮ

Update: 2018-06-10 16:55 GMT

ಹನೂರು,ಜೂ.10: ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಸುತ್ತ ಮತ್ತಲಿನ ಪರಿಸರ ಹಾಳಾಗಿ ನಮ್ಮ ಜೀವ ಸಂಕುಲ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇದರ ದುಷ್ಪರಿಣಾಮವನ್ನು ಅರಿತು ನಾವು ಶುದ್ಧ ಪರಿಸರವನ್ನು ನಿರ್ಮಾಣಮಾಡಬೇಕಾಗಿದೆ ಎಂದು ಪಿ.ಜಿ.ಪಾಳ್ಯ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ತಿಳಿಸಿದರು.

ಮಲೈಮಹದೇಶ್ವರ ವನ್ಯಜೀವಿಧಾಮ ವಿಭಾಗ ಕೊಳ್ಳೇಗಾಲ ಪಿ.ಜಿ ಪಾಳ್ಯ ವನ್ಯಜೀವಿ ವಲಯದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಗಾರದ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಉಳಿದರೆ ಮಾತ್ರ ನಮ್ಮ ಮನುಕುಲ ಉಳಿಯಲು ಸಾಧ್ಯ. ಪರಿಸರ ವಿನಾಶಕ್ಕೆ ಕಾರಣವಾಗುವ ಹಾನಿಕಾರಕ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ಹಾಳಾಗುತ್ತಿದೆ. ಆದ್ದರಿಂದ ನಾವು ನಿತ್ಯದ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಬದಲಿಗೆ ಕೈಚೀಲ ಅಥವಾ ಸೆಣಬಿನ ಚೀಲವನ್ನು ಸಾಧ್ಯವಾದಷ್ಟು ಬಳಕೆ ಮಾಡಿಕೊಂಡರೆ ಸಾಧ್ಯವಾದಷ್ಟು ಮಟ್ಟಿಗೆ ಪರಿಸರ ಸಮತೋಲನಕ್ಕೆ ಕೈಜೋಡಿಸಿದಂತೆ ಆಗುತ್ತದೆ ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಬೈಲೂರು ಆರ್‍ಎಫ್‍ಒ ಕೆ ಶಿವರಾಮ್, ಪಿ.ಜಿ ಪಾಳ್ಯ ಆರ್‍ಎಫ್‍ಒ ಸೈಯದ್‍ ಪಾಷ ಉಪವಲಯ ಅರಣ್ಯಾಧಿಕಾರಿ ಕುಮಾರ್, ಮಹೇಶ್ , ವಿಜಯ್, ನವೀನ್, ಗ್ರಾಪಂ ಸದಸ್ಯ ಮರಿಶೆಟ್ಟಿ ಮತ್ತು ಮಹಿಳಾ ಸಂಘದ ಸದಸ್ಯರು, ಅರಣ್ಯ ಇಲಾಖೆಯ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News