ಮೈಸೂರು: ಮತ್ತೊಂದು ದಾಖಲೆ ನಿರ್ಮಿಸಲು ಯೋಗ ತಾಲೀಮು

Update: 2018-06-10 17:13 GMT

ಮೈಸೂರು, ಜೂ.10: ಕಳೆದ ವಿಶ್ವ ಯೋಗ ದಿನದಂದು ಗಿನ್ನಿಸ್ ದಾಖಲೆ ಮಾಡಿದ್ದ ಸಾಂಸ್ಕೃತಿಕ ನಗರಿ ಈಗ ಮತ್ತೊಂದು ದಾಖಲೆ ನಿರ್ಮಿಸುವತ್ತ  ಸಿದ್ಧತೆಗೊಳ್ಳುತ್ತಿದೆ.

ಯೋಗಪಟುಗಳು ರವಿವಾರ ಮುಂಜಾನೆ 6 ಗಂಟೆಯಿಂದಲೇ ಮೈಸೂರಿನ ಅರಮನೆಯ ಮುಂಭಾಗ ಯೋಗಾಭ್ಯಾಸದಲ್ಲಿ ತಲ್ಲೀನರಾಗಿದ್ದರು. ಇದೇ ತಿಂಗಳ 21 ರಂದು ನಡೆಯಲಿರುವ ವಿಶ್ವ ಯೋಗ ದಿನಕ್ಕೆ ಕಳೆದ ಒಂದು ವಾರದಿಂದಲೂ ಯೋಗಪಟುಗಳು ಅಭ್ಯಾಸದಲ್ಲಿ  ತೊಡಗಿದ್ದಾರೆ. ಜಿಲ್ಲಾಡಳಿತದಿಂದ ಮತ್ತು ವಿವಿಧ ಯೋಗ ಸಂಸ್ಥೆಗಳಿಂದ ಅರಮನೆ ಮುಂಭಾಗದ ಆವರಣದಲ್ಲಿ ಪೂರ್ವಾಭ್ಯಾಸ ಆಯೋಜಿಸಲಾಗಿದ್ದು, ಕಳೆದ ವರ್ಷ 56 ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳನ್ನು ಸೇರಿಸುವುದರ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು. ಈ ಬಾರಿ 70 ಸಾವಿರಕ್ಕೂ ಹೆಚ್ಚು ಯೋಗಪಟುಗಳನ್ನು ಸೇರಿಸುವ ಮೂಲಕ ಮತ್ತೊಂದು ದಾಖಲೆಗೆ ಮೈಸೂರು ಜಿಲ್ಲಾಡಳಿತ ಮತ್ತು ವಿವಿಧ ಯೋಗ ಸಂಸ್ಥೆಗಳು ಸಿದ್ಧವಾಗುತ್ತಿವೆ.

ಮೈಸೂರಿನ ರೇಸ್ ಕೋರ್ಸ್ ಬಳಿಯ ಮೈದಾನದಲ್ಲಿ ಜೂನ್ 21ರ ವಿಶ್ವ ಯೋಗ ದಿನ ಆಯೋಜನೆ ಮಾಡಲಾಗಿದ್ದು, ಮೈಸೂರು ಜಿಲ್ಲಾಡಳಿತ 70 ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳನ್ನು ಸೇರಿಸುವ ನಿರೀಕ್ಷೆ ಹೊಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News