ದಾವಣಗೆರೆ : ಸಂಭ್ರಮದ ಈದುಲ್ ಫಿತ್ರ್ ಆಚರಣೆ

Update: 2018-06-16 18:42 GMT

ದಾವಣಗೆರೆ,ಜೂ.16: ಮುಸ್ಲಿಮರು ಪವಿತ್ರ ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಬೆಳಗ್ಗೆಯಿಂದಲೇ ಹಬ್ಬದ ಆಚರಣೆ ಆರಂಭವಾಗಿತ್ತು. ಶ್ವೇತ ವಸ್ತ್ರಧಾರಿಗಳಾದ ಮುಸ್ಲಿಮರು ಬೆಳಗ್ಗೆ 7 ಗಂಟೆಗೆ ಪಿ.ಬಿ. ರಸ್ತೆಯ ಹಳೇ ಈದ್ಗಾ ಮೈದಾನ, ಮಾಗನಹಳ್ಳಿ ರಸ್ತೆಯ ರಜಾವುಲ್ಲಾ ಮುಸ್ತಫಾ, ನಗರದ ಹೊಸ ಈದ್ಗಾ ಮೈದಾನದಲ್ಲಿ ಹಾಗೂ ಕೈಗಾರಿಕಾ ಪ್ರದೇಶದಲ್ಲಿರುವ ಖಲಂದರಿಯಾ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮಸೀದಿಯ ಹೊರಭಾಗದಲ್ಲಿ ಬಡವರಿಗೆ ದಾನ ಮಾಡುವ ಆಚರಣೆಯ ದೃಶ್ಯ ಕಂಡುಬಂತು.ದಾನ ಧರ್ಮಗಳ ಪ್ರತೀಕ ಈದುಲ್ ಫಿತ್ರ ಉಪವಾಸ ವೃತವನ್ನು ಮುಸ್ಲಿಂ ಬಾಂಧವರು ಒಂದು ತಿಂಗಳು ಆಚರಿಸಿದ್ದರು. 

ನಗರದಲ್ಲಿ ಕಳೆದು ಎರಡು ಮೂರು ದಿನಗಳಿಂದ ವರುಣ ದೇವ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದು, ಹಬ್ಬದ ದಿನದಂದು ಮಳೆ ಬರುವ ಸಾಧ್ಯತೆ ಇದ್ದ ಕಾರಣ ಹಬ್ಬಕ್ಕೆ ಮಳೆ ಅಡ್ಡಿ ಆಗಬಹುದು ಎಂಬ ಆತಂಕ ಮುಸ್ಲಿಮರಲ್ಲಿ ಮನೆ ಮಾಡಿತ್ತು. ಆದರೆ, ಅದೃಷ್ಟವಶಾತ್ ವರುಣ ದೇವ ಬಿಡುವು ಕೊಟ್ಟು ರಂಜಾನ್ ಹಬ್ಬದ ಸಂಭ್ರಮಕ್ಕೆ ಮೆರಗು ನೀಡಿತು. 

ನಗರದಲ್ಲಿ ಶನಿವಾರ ನಡೆದ ಹಬ್ಬದ ಸಂಭ್ರಮಕ್ಕೆ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಮತ್ತಿತರ ಗಣ್ಯರು ಪಾಲ್ಗೊಂಡು ಮುಸ್ಲಿಮರೊಂದಿಗೆ ಶುಭಾಶಯ ವಿನಿಯಮ ಮಾಡಿಕೊಂಡರು. ಮುಸ್ಲಿಂ ಬಂಧುಗಳು ಶಾಂತಿ, ಸಹನೆ, ನೆಮ್ಮದಿಯಿಂದ ಹಬ್ಬ ಆಚರಿಸಲಿ, ಸಮಾಜದಲ್ಲಿ ಭ್ರಾತೃತ್ವ ಮತ್ತು ಸಹಬಾಳ್ವೆಯ ಮೌಲ್ಯ ಬಿತ್ತಲಿ ಎಂದು ಆಶಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News