ಬ್ರಿಟನ್: ಸುಲಭ ವೀಸಾ ದೇಶಗಳ ಪಟ್ಟಿಯಲ್ಲಿ ಭಾರತವಿಲ್ಲ

Update: 2018-06-16 19:03 GMT

ಲಂಡನ್, ಜೂ. 16: ‘ಕಡಿಮೆ ಅಪಾಯಕಾರಿ’ ಎಂಬುದಾಗಿ ಪರಿಗಣಿಸಲ್ಪಡುವ ದೇಶಗಳ ಪಟ್ಟಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಹೊರಗಿಡಲು ಬ್ರಿಟನ್ ಸರಕಾರ ನಿರ್ಧರಿಸಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಪಟ್ಟಿಯಲ್ಲಿ ಬರುವ ದೇಶಗಳ ವಿದ್ಯಾರ್ಥಿಗಳು ಬ್ರಿಟನ್‌ನ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವಾಗ ಅವರು ಸುಲಭ ವೀಸಾ ಪ್ರಕ್ರಿಯೆಯ ಪ್ರಯೋಜನ ಪಡೆಯುತ್ತಾರೆ.

ವಲಸೆ ನೀತಿಯಲ್ಲಿ ಬದಲಾವಣೆಗಳನ್ನು ಸೂಚಿಸುವ ನಿರ್ಣಯವೊಂದನ್ನು ಬ್ರಿಟನ್ ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾಗಿದೆ.

ಸುಮಾರು 25 ದೇಶಗಳ ವಿದ್ಯಾರ್ಥಿಗಳಿಗೆ ‘ಟಯರ್ 4 ವೀಸಾ ಕೆಟಗರಿ’ಯಿಂದ ವಿನಾಯಿತಿ ನೀಡಲಾಗಿದೆ ಎಂದು ವಿದೇಶ ಕಚೇರಿ ತಿಳಿಸಿದೆ.

ಇದರ ಪ್ರಕಾರ, ಬ್ರಿಟನ್‌ನಲ್ಲಿ ವ್ಯಾಸಂಗ ಮಾಡಬಯಸುವ ಭಾರತೀಯ ವಿದ್ಯಾರ್ಥಿಗಳು ಕಠಿಣ ವೀಸಾ ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News