ಕವಿತಾ, ಇಂದಿರಾ ಲಂಕೇಶ್‌ರಿಂದ ಸಿದ್ದರಾಮಯ್ಯ ಭೇಟಿ

Update: 2018-06-17 14:36 GMT

ಬೆಂಗಳೂರು, ಜೂ.17: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಸಹೋದರಿ ಕವಿತಾ ಲಂಕೇಶ್ ಹಾಗೂ ತಾಯಿ ಇಂದಿರಾ ಲಂಕೇಶ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರು.

ಈ ವೇಳೆ ಕವಿತಾ ಲಂಕೇಶ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಿರಿಯ ಪೊಲಿಸ್ ಅಧಿಕಾರಿ ವಿ.ಕೆ.ಸಿಂಗ್‌ರನ್ನು ತನಿಖಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕರಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ತಿಳಿಸಲು ಅವರ ಮನೆಗೆ ಬಂದಿದ್ದಾಗಿ ಹೇಳಿದರು. ಕೊಲೆಯಾದ ಗೌರಿಗೆ ನ್ಯಾಯ ಸಿಗಬೇಕಿತ್ತು. ಆರೋಪಿಗಳ ಬಂಧನದ ಮೂಲಕ ನಿಷ್ಪಕ್ಷಪಾತ ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೌರಿಲಂಕೇಶ್ ಹತ್ಯೆ ಪ್ರಕರಣವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡು ಕಟ್ಟುನಿಟ್ಟಿನ ತನಿಖೆಗೆ ಆದೇಶಿಸಿದ್ದರು. ಎಸ್‌ಐಟಿ ಅಧಿಕಾರಿಗಳ ದಿಟ್ಟತನದ ತನಿಖೆಯಿಂದಾಗಿ ಹಲವು ಪ್ರಮುಖ ಆರೋಪಿಗಳ ಬಂಧನವಾಗಿದೆ. ಆರೋಪಿಗಳಿಗೆ ಇಂತಹದೇ ಶಿಕ್ಷೆ ಕೊಡಿ ಅಂತ ಹೇಳಲು ನಾವು ನ್ಯಾಯವಾದಿಗಳಲ್ಲ. ಒಟ್ಟಾರೆ ನಮ್ಮ ಕುಟುಂಬಕ್ಕೆ ಸರಕಾರ, ಪೊಲೀಸ್ ಹಾಗೂ ನ್ಯಾಯಾಲಯದಿಂದ ಸೂಕ್ತವಾದ ನ್ಯಾಯ ಸಿಗುವ ಭರವಸೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News