ಎಐಎಡಿಎಂಕೆಯ 18 ಶಾಸಕರ ಅಮಾನತು: ಅರ್ಜಿ ಹಿಂದೆ ತೆಗೆಯಲು ಓರ್ವ ಶಾಸಕ ನಿರ್ಧಾರ

Update: 2018-06-17 16:09 GMT

ಚೆನ್ನೈ, ಜ. 17: ಟಿಟಿವಿ ದಿನಕರನ್ ಪಕ್ಷದ ಓರ್ವ ಸದಸ್ಯ ಹಾಗೂ ಶಾಸಕ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯನ್ನು ಶೀಘ್ರ ಹಿಂದೆಗೆಯಲಾಗುವುದು ಎಂದು ಘೋಷಿಸುವುದರೊಂದಿಗೆ ಎಐಎಡಿಎಂಕೆಯ 18 ಶಾಸಕರ ಅಮಾನತು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಶಾಸಕರ ಉಚ್ಚಾಟನೆ ಪ್ರಕರಣಕ್ಕೆ ಸಂಬಂಧಿಸಿ ಎರಡು ಸದಸ್ಯರ ಪೀಠ ಗುರುವಾರ ಭಿನ್ನ ತೀರ್ಪು ನೀಡಿತ್ತು. ವಿಧಾನ ಸಭೆ ಸ್ಪೀಕರ್ ಪಿ. ಧನಪಾಲ್ ಅವರು ಅಮಾನತು ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಇಂದ್ರಾ ಬ್ಯಾನರ್ಜಿ ಎತ್ತಿ ಹಿಡಿದಿದ್ದರು. ಆದರೆ, ನ್ಯಾಯಮೂರ್ತಿ ಎಂ. ಸುಂದರ್ ತಳ್ಳಿ ಹಾಕಿದ್ದರು. ‘‘ಮದ್ರಾಸ್ ಹೈಕೋರ್ಟ್ ಜನರನ್ನು ನಿರ್ಲಕ್ಷಿಸಿದೆ ಹಾಗೂ ನಾನು ನ್ಯಾಯಾಂಗದ ಮೇಲಿನ ಭರವಸೆ ಕಳೆದುಕೊಂಡಿದ್ದೇನೆ. ಪ್ರಕರಣ ಮತ್ತೆ ಮತ್ತೆ ಮುಂದೂಡಿಕೆಯಾಗುತ್ತಿರುವುದರಿಂದ ನಾನು ಮೇಲ್ಮನವಿ ಸಲ್ಲಿಸಲಾರೆ ಹಾಗೂ ಇದು ಅಲ್ಪಮತದ ಸರಕಾರಕ್ಕೆ ಲಾಭ’’ ಎಂದು ಅಮ್ಮಾ ಮಕ್ಕಳಂ ಮುನ್ನೇತ್ರ ಕಳಗಂನ ಪ್ರಚಾರ ಕಾರ್ಯದರ್ಶಿ ತಂಗತಮಿಳ್ ಸೆಲ್ವಂ ಅವರು ಹೇಳಿದ್ದಾರೆ. ಅಂಡಿಪಟ್ಟಿ ಜನರಿಗಾಗಿ ನಾನು ಅರ್ಜಿ ಹಿಂದೆ ತೆಗೆಯಲು ತೀರ್ಮಾನಿಸಿದೆ ಎಂದು ಅವರು ಸುದ್ದಿಗಾರರಿಗೆ ಶನಿವಾರ ತಿಳಿಸಿದರು.

ಸೆಲ್ವಂ ಅವರ ನಿರ್ಧಾರ ಅವರ ವೈಯುಕ್ತಿಕ ಎಂದು ದಿನಕರನ್ ಸ್ಪಷ್ಟಪಡಿಸಿದ್ದಾರೆ. ನಿರ್ಧಾರಗಳನ್ನು ತೆಗೆದುಕೊಳ್ಳಲು ನನ್ನ ಬೆಂಬಲಿಗರು ಮುಕ್ತ. ಚುನಾವಣೆ ಎದುರಿಸುವ ವಿಶ್ವಾಸ ಸೆಲ್ವಂ ಅವರಿಗೆ ಇದೆ. ಆದುದರಿಂದ ನಾನು ಮಧ್ಯ ಪ್ರವೇಶಿಸಲಾರೆ ಎಂದು ದಿನಕರನ್ ಹೇಳಿದ್ದಾರೆ. ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ಕೆಲವು ಅನರ್ಹಗೊಂಡ ಶಾಸಕರು ಬೇಟಿಯಾಗಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದಾಗ ಟಿಟಿವಿ ದಿನಕರನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News