ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸೇವಾವಧಿ 3 ತಿಂಗಳು ವಿಸ್ತರಣೆ

Update: 2018-06-18 18:32 GMT

ಬೆಂಗಳೂರು,ಜೂ.18: ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಸೇವಾವಧಿಯನ್ನು ಸೆಪ್ಟೆಂಬರ್ 2018ರ ವರೆಗೆ ವಿಸ್ತರಿಸಲು ಸರಕಾರ ನಿರ್ಧರಿಸಿದೆ.

ರತ್ನಪ್ರಭಾ ಅವರು ಒಬ್ಬ ಉತ್ತಮ ಅಧಿಕಾರಿಯಾಗಿದ್ದಾರೆ. ಅವರಿಗೆ ವಿವಿಧ ಇಲಾಖೆಗಳ ಬಗ್ಗೆ ಸರಿಯಾದ ಮಾಹಿತಿಯಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅವರ ಪಾತ್ರ ದೊಡ್ಡದಿದೆ. ನೂತನ ಸರಕಾರವು ಇದೀಗ ತನ್ನ ಕಾರ್ಯವನ್ನು ಆರಂಭ ಮಾಡಿದ್ದು ಈ ಹಂತದಲ್ಲಿ ರತ್ನಪ್ರಭಾರಂಥ ಅನುಭವಿ ಅಧಿಕಾರಿಯ ಅವಶ್ಯಕತೆ ಬಹಳ ಇದೆ. ಈ ಎಲ್ಲ ಕಾರಣಗಳಿಂದ ರತ್ನಪ್ರಭಾ ಅವರನ್ನು 2018ರ ಸೆಪ್ಟೆಂಬರ್‌ವರೆಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸರಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News