ಪ್ರಧಾನಿ ಮೋದಿಗೆ ಮದುವೆಯೇ ಆಗಿಲ್ಲ ಎಂದ ಗುಜರಾತ್ ಮಾಜಿ ಸಿಎಂ ಆನಂದಿಬೆನ್ ಪಟೇಲ್

Update: 2018-06-20 06:35 GMT

ಭೋಪಾಲ್, ಜೂ. 20: ಪ್ರಧಾನಿ ನರೇಂದ್ರ ಮೋದಿ ಮದುವೆಯಾಗಿಯೇ ಇಲ್ಲ ಎಂದು ಮಧ್ಯ ಪ್ರದೇಶದ ರಾಜ್ಯಪಾಲೆ ಹಾಗೂ ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಹೇಳಿದ್ದಾರೆ.

ಮಧ್ಯ ಪ್ರದೇಶದ ಹರ್ದಾ ಜಿಲ್ಲೆಯ ತಿಮರಿ ಎಂಬಲ್ಲಿನ ಅಂಗನವಾಗಿ ಕೇಂದ್ರವೊಂದರಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬೆನ್ ‘‘ನರೇಂದ್ರ ಭಾಯಿ ಮದುವೆಯಾಗಿಲ್ಲ, ಆದರೆ ಅವರಿಗೆ ಮಹಿಳೆಯರ ಮತ್ತು ಮಕ್ಕಳ ಜನನ ಪೂರ್ವ ಮತ್ತು ಜನನಾಂತರ ಸಮಸ್ಯೆಗಳು ಅರ್ಥವಾಗುತ್ತದೆ’’ ಎಂದು ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಹೇಳಿದ್ದಾರೆ.

ಆನಂದಿ ಬೆನ್ ಹೀಗೆ ಹೇಳುತ್ತಿರುವಾಗ ಅಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಅದನ್ನು ಸೆರೆ ಹಿಡಿದಿದ್ದಾರೆ. ಆನಂದಿಬೆನ್ ನಿಖರವಾದ ಮಾತುಗಳು ಹೀಗಿವೆ. ‘‘ಉನ್ಹೋನೆ (ಮೋದಿ) ವಿವಾಹ್ ನಹೀ ಕಿಯಾ ಹೈ ಯೇ ತೋ ಪತಾ ಹೈ ನಾ ಆಪ್ಕೋ, ನರೇಂದ್ರಭಾಯಿ ನೇ ಶಾದಿ ನಹೀ ಕೀ ಹೈ ( ಅವರು ಮದುವೆಯಾಗಿಲ್ಲ, ನಿಮಗೆ ಅದು ತಿಳಿದಿದೆಯಲ್ಲ ? ನರೇಂದ್ರ ಭಾಯಿ ಮದುವೆಯಾಗಲೇ ಇಲ್ಲ)."

ಪಟೇಲ್ ಈ ರೀತಿ ಹೇಳುವಾಗ ಅವರ ಪಕ್ಕ ಶಾಸಕ ಸಂಜಯ್ ಶಾ ಕುಳಿತಿದ್ದರು. 2014 ಲೋಕಸಭಾ ಚುನಾವಣೆಗಿಂತ ಮುಂಚೆ ಸಲ್ಲಿಸಲಾದ ತಮ್ಮ ಅಫಿದಾವಿತ್ ನಲ್ಲಿ ಮೋದಿ ತಾವು ವಿವಾಹಿತ ಹಾಗೂ 1968ರಲ್ಲಿ ಜಶೋದಾ ಬೆನ್ ಅವರನ್ನು ವಿವಾಹವಾಗಿದ್ದಾಗಿ ಬರೆದಿದ್ದರು. ಪ್ರಧಾನಿಯೊಬ್ಬರ ಪತ್ನಿಗೆ ನೀಡಲಾಗುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನೂ ಜಶೋದಾ ಬೆನ್ ಗೆ ನೀಡಲಾಗಿದೆ.

ಅಹ್ಮದಾಬಾದ್ ನಲ್ಲಿ ರಮಝಾನ್ ಸಂದರ್ಭ ಇಫ್ತಾರ್ ನಲ್ಲಿ ಅವರು ಕಳೆದ ವಾರ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News