ನನ್ನ ಬಳಿ ಸಾಕಷ್ಟು ಡೈರಿಗಳು ಇವೆ : ಸಚಿವ ಡಿಕೆಶಿ

Update: 2018-06-20 07:16 GMT

ಬೆಂಗಳೂರು, ಜೂ.20: ನನ್ನ ಬಳಿಯೂ ಸಾಕಷ್ಟು ಡೈರಿಗಳು ಇವೆ. ಅವುಗಳಲ್ಲಿ ಏನೆಲ್ಲಾ ಮಾಹಿತಿ ಇವೆ. ಎಲ್ಲವೂ ನನಗೆ ಗೊತ್ತಿದೆ. ಕೊನೆಯ ವರೆಗೆ ಕಾದು ನೋಡುತ್ತೇನೆ.ಸೂಕ್ತ ಕಾಲ, ಸಮಯ ಬಂದಾಗ ಅವುಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ವೈದ್ಯಕೀಯ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನಿಮಗೆ ಏನು ಅನ್ನಿಸುತ್ತದೆ ಅದನ್ನು ನೀವು ಮಾಡಿ. ಅವರಿಗೆ ಏನು ಅನಿಸುತ್ತದೆ ಅದನ್ನು ಅವರು ಮಾಡಲಿ.ಯಾರೋ ಏನೋ ಹೇಳಿದರೆಂದು ನನಗೆ ಹೋಲಿಸುವುದಲ್ಲ. ದೇಶ, ಸಂವಿಧಾನ, ನ್ಯಾಯಾಲಯ ಎಲ್ಲವೂ ಇದೆ. ಕಾನೂನು ಮೂಲಕ ಹೋರಾಟ ಮಾಡುವುದು ನನಗೆ ಗೊತ್ತಿದೆ ಎಂದು ಗುಡುಗಿದ್ದಾರೆ.

ಐಟಿ ಅಧಿಕಾರಿಗಳಿಗೆ ಯಾವ  ಒತ್ತಡ ಇದೆಯೋ ಗೊತ್ತಿಲ್ಲ. ಉದ್ಯಮಿಗಳು, ರಾಜಕಾರಣಿಗಳ ಮನೆ ಮೇಲೆ ದಾಳಿ ಆಗುತ್ತದೆ. ಅದ್ರೆ ನನಗೆ ಕೊಡುವಷ್ಟು ಕಿರಕುಳವನ್ನು ಬೇರೆ ಯಾರಿಗೂ ಕೊಡುತ್ತಿಲ್ಲ. ದಾಳಿಯಿಂದ ನನಗೆ ಹಿಂಸೆ ಆಗುತ್ತಿದೆ.  ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ? ಎಂದು ಪ್ರಶ್ನಿಸಿರುವ ಅವರು  ನನ್ನನ್ನು ಹೆದರಿಸಲು ಬಂದ್ರೆ ನಾನೇನು ಹೆದರಲ್ಲ ಎಂದು ಸವಾಲು ಹಾಕಿದ್ದಾರೆ.

 ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಕೋರ್ಟ್ ನೋಟಿಸ್ ಬಂದಿಲ್ಲ. ಕೋರ್ಟ್ ಗೆ  ನಾವು ತಲೆ ಬಾಗುತ್ತೇವೆ. ಈಗ ವಿಚಾರಣೆಗೆ ಹಾಜರಾಗಿ ಅಂತ ನೋಟಿಸ್‌ ಬಂದಿದೆ ಎಂದು ಡಿಕೆಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News