ಪಾಕ್ ನಲ್ಲಿ ಚುನಾವಣೆ: ಮಾಜಿ ಮಿಲಿಟರಿ ಆಡಳಿತಗಾರ ಮುಶ್ರಫ್ ನಾಮಪತ್ರ ತಿರಸ್ಕೃತ

Update: 2018-06-20 08:31 GMT

ಇಸ್ಲಾಮಾಬಾದ್​ , ಜೂ.20:  ಪಾಕಿಸ್ತಾನದಲ್ಲಿ ಸಾವ್ರತ್ರಿಕ ಚುನಾವಣೆಯ ಕಾವು ಏರುತ್ತಿದ್ದು,  ಮಾಜಿ ಮಿಲಿಟರಿ ಆಡಳಿತಗಾರ  ಪರ್ವೇಜ್ ಮುಶ್ರಫ್ ನಾಮಪತ್ರವನ್ನು ಪಾಕಿಸ್ತಾನ ಚುನಾವಣಾ ಆಯೋಗ ಮಂಗಳವಾರ ತಿರಸ್ಕರಿಸಿದೆ.

ಮುಶ್ರಫ್ ಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ  2013ರಲ್ಲಿ ಪೇಶಾವರ ಹೈಕೋರ್ಟ್ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಅವರ  ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ
ನಾಮಪತ್ರವನ್ನು ತಿರಸ್ಕರಿಸಿರುವ  ಕ್ರಮವನ್ನು  ಪ್ರಶ್ನಿಸಿ  ಸ್ಪರ್ಧಿಗಳು ಜೂನ್​ 22ರಂದು ಅರ್ಜಿ ಸಲ್ಲಿಸಲು ಅವಕಾಶ ಇದೆ.. ಜೂನ್​ 27ರಂದು ಚುನಾವಣಾ ನ್ಯಾಯಮಂಡಳಿ ವಿಚಾರಣೆ ನಡೆಸಲಿದೆ.

ಚುಣಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮಪಟ್ಟಿ ಜೂನ್​ 28ರಂದು ಪ್ರಕಟಗೊಳ್ಳಲಿದೆ.  ನಾಮಪತ್ರ ಹಿಂಪಡೆಯಲು ಜೂನ್​ 29 ಕೊನೆಯ ದಿನವಾಗಿದೆ. ಜುಲೈ 25ರಂದು ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News