ಇಸ್ರೇಲ್ ವಿರೋಧಿ ಪ್ರತಿಭಟನೆ | ಪ್ರಚೋದನಕಾರಿ ಹೇಳಿಕೆ ನೀಡಿದ ಕೊಲಂಬಿಯಾ ವಿವಿ ವಿದ್ಯಾರ್ಥಿಗೆ ನಿಷೇಧ

Update: 2024-04-27 15:33 GMT

PC : AP

ವಾಷಿಂಗ್ಟನ್: ಅಮೆರಿಕದ ವಿವಿಗಳಲ್ಲಿ ಭುಗಿಲೆದ್ದಿರುವ ಇಸ್ರೇಲ್ ವಿರೋಧಿ ಪ್ರತಿಭಟನೆಯ ನಡುವೆ, “ಯಹೂದಿಗಳು ಬದುಕಲು ಅರ್ಹರಲ್ಲ” ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ ವಿದ್ಯಾರ್ಥಿಯನ್ನು ಕೊಲಂಬಿಯಾ ವಿವಿ ಕ್ಯಾಂಪಸ್ ಪ್ರವೇಶಿಸದಂತೆ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊಲಂಬಿಯಾ ವಿವಿಯಲ್ಲಿ ನಡೆಯುತ್ತಿರುವ ಇಸ್ರೇಲ್ ವಿರೋಧಿ ಪ್ರತಿಭಟನೆಯ ಮುಖಂಡ ಖೈಮಾನಿ ಜೇಮ್ಸ್ ` ಯಹೂದಿಗಳು ಬದುಕಲು ಅರ್ಹರಲ್ಲ. ಅವರನ್ನು ಕೊಲ್ಲಬೇಕು. ಅವರ ಅಸ್ತಿತ್ವ ಮತ್ತು ಅವರು ನಿರ್ಮಿಸಿದ ಯೋಜನೆ(ಇಸ್ರೇಲ್) ಶಾಂತಿಗೆ ವಿರುದ್ಧವಾಗಿದೆ. ಆದ್ದರಿಂದ ಅಂತಹ ಜನರು ಸಾಯಬೇಕೆಂದು ಕರೆ ನೀಡಲು ನನಗೆ ಖುಷಿಯಾಗುತ್ತದೆ' ಎಂದು ಹೇಳಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಯಹೂದಿಗಳು ದುಷ್ಟರು ಮತ್ತು ಅವರನ್ನು ನಾಝಿಗಳಿಗೆ ಹೋಲಿಸಬಹುದು. ಯಹೂದಿಗಳು ಜಗತ್ತಿನ ಪ್ರಗತಿಗೆ ಅಡ್ಡಿಯಾಗಿದ್ದಾರೆ. ಯಹೂದಿಗಳು ಹಾಗೂ ಬಿಳಿಯ ಪ್ರಾಬಲ್ಯವಾದಿಗಳು ಅಸ್ತಿತ್ವದಲ್ಲಿ ಇರಬಾರದು. ಯಾಕೆಂದರೆ ಅವರು ದುರ್ಬಲ ಜನರನ್ನು ಕೊಲ್ಲುತ್ತಾರೆ ಮತ್ತು ಹಾನಿ ಮಾಡುತ್ತಾರೆ' ಎಂದು ವೀಡಿಯೊದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಚೋದನಕಾರೀ ಹೇಳಿಕೆ ನೀಡಿರುವ ಜೇಮ್ಸ್‍ನನ್ನು ವಿವಿ ಕ್ಯಾಂಪಸ್‍ನಿಂದ ನಿಷೇಧಿಸಲಾಗಿದೆ ಎಂದು ವಿವಿಯ ಆಡಳಿತ ವರ್ಗ ಹೇಳಿದೆ. ಧಾರ್ಮಿಕ, ಜನಾಂಗೀಯ ಅಥವಾ ರಾಷ್ಟ್ರೀಯ ಗುರುತಿನ ಆಧಾರದ ಮೇಲೆ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹಿಂಸೆಯ ಕರೆಗಳು ಮತ್ತು ಹೇಳಿಕೆಗಳು ಸ್ವೀಕಾರಾರ್ಹವಲ್ಲ ಮತ್ತು ವಿಶ್ವವಿದ್ಯಾಲಯದ ನೀತಿಯನ್ನು ಉಲ್ಲಂಘಿಸುತ್ತವೆ ಎಂದು ವಿವಿಯ ವಕ್ತಾರರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News