×
Ad

ಅಮೆರಿಕ: ರಸ್ತೆ ಅಪಘಾತ, ಮೂವರು ಭಾರತೀಯ ಮಹಿಳೆಯರ ಮೃತ್ಯು

Update: 2024-04-27 20:53 IST

ನ್ಯೂಯಾರ್ಕ್: ಅಮೆರಿಕದ ಸೌತ್ ಕರೋಲಿನಾದ ಗ್ರೀನ್‍ವಿಲೆ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗುಜರಾತ್ ಮೂಲದ ಮೂವರು ಮಹಿಳೆಯರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮಿತಿ ಮೀರಿದ ವೇಗದಲ್ಲಿ ಧಾವಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಡಿವೈಡರ್ ಗೆ ಬಡಿದು 20 ಅಡಿ ಮೇಲಕ್ಕೆ ಚಿಮ್ಮಿ ಸೇತುವೆಯ ಮತ್ತೊಂದು ಬದಿಯಲ್ಲಿದ್ದ ಮರಕ್ಕೆ ಅಪ್ಪಳಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್‍ನ ಆನಂದ್ ನಗರದ ನಿವಾಸಿಗಳಾದ ರೇಖಾಬೆನ್ ದಿಲೀಪ್‍ಭಾಯ್ ಪಟೇಲ್, ಸಂಗೀತಾ ಬೆನ್ ಭವೇಷ್‍ಭಾಯ್ ಮತ್ತು ಮನೀಷಾ ಬೆನ್ ರಾಜೇಂದ್ರಭಾಯ್ ತೀವ್ರಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ಕಾರಿನ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಪಘಾತದಲ್ಲಿ ಬೇರೆ ಯಾವುದೇ ವಾಹನ ಒಳಗೊಂಡಿಲ್ಲ. ಮಿತಿಮೀರಿದ ವೇಗ ಅಪಘಾತಕ್ಕೆ ಕಾರಣವೆಂಬುದರಲ್ಲಿ ಸಂಶಯವಿಲ್ಲ. ಡಿವೈಡರ್ ಗೆ ಬಡಿದ ಕಾರು 20 ಅಡಿ ಮೇಲಕ್ಕೆ ಚಿಮ್ಮಿರುವುದು ಕಾರಿನ ವೇಗವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News