ಅನಂತನಾಗ್ ಜಿಲ್ಲೆಯಲ್ಲಿ ಎನ್ ಕೌಂಟರ್: ನಾಲ್ವರು ಉಗ್ರರು, ಓರ್ವ ನಾಗರಿಕ ಸಾವು

Update: 2018-06-22 07:09 GMT

ಶ್ರೀನಗರ, ಜೂ.22: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ನ್ಯೂ ಶೇರಾ ಗ್ರಾಮದಲ್ಲಿ ಭದ್ರತಾ ಪಡೆ ಮತ್ತು ಉಗ್ರರೊಂದಿಗೆ  ನಡೆದ ಗುಂಡಿನ ಚಕಮಕಿಯಲ್ಲಿ  ನಾಲ್ವರು ಉಗ್ರರು   ಮತ್ತು ಓರ್ವ ನಾಗರಿಕ ಮೃತಪಟ್ಟ ಘಟನೆ   ಶುಕ್ರವಾರ ನಡೆದಿದೆ.

ದಕ್ಷಿಣ ಕಾಶ್ಮೀರದ ಸಿರಿಗುಪ್ವಾರ ಪ್ರದೇಶದಲ್ಲಿ  ಉಗ್ರರು ಅಡಗಿರುವ ಖಚಿತ ವರ್ತಮಾನದ ಮೇರೆಗೆ ಭದ್ರತಾ ಪಡೆ, ಪೊಲೀಸರು ಶೋಧ ಆರಂಭಿಸಿದಾಗ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು ಎಂದು ತಿಳಿದು ಬಂದಿದೆ.

ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಆಗ ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮವಾಗಿ ಹಲವರು ಗಾಯಗೊಂಡರು.

ಘರ್ಷಣೆಯಲ್ಲಿ  ಪೊಲೀಸ್ ಪೇದೆಯೊಬ್ಬರು ಗಾಯಗೊಂಡರು. ಹಲವು ಮಂದಿ ನಾಗರಿಕರಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News