ಮಡಿಕೇರಿ: 8 ದಿನಗಳ ನಂತರ ಪತ್ತೆಯಾದ ಯುವಕನ ಮೃತದೇಹ

Update: 2018-06-30 14:56 GMT

ಮಡಿಕೇರಿ, ಜೂ.30: ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತದಲ್ಲಿ ಕಳೆದ ಶುಕ್ರವಾರ ಕಾಲು ಜಾರಿಬಿದ್ದು ಮೃತಪಟ್ಟ ಕುಶಾಲನಗರ ಸುಂದರನಗರ ನಿವಾಸಿ ಮನೋಜ್(24)ನ ಮೃತದೇಹ ಪತ್ತೆಯಾಗಿದೆ.

ಮಲ್ಲಳ್ಳಿ ಗ್ರಾಮದ ಕೃಷಿಕ ಮಲ್ಲಪ್ಪ ನೀಡಿದ ಮಾಹಿತಿಯನ್ವಯ, ಠಾಣಾಧಿಕಾರಿ ಎಂ.ಶಿವಣ್ಣ ನೇತೃತ್ವದ ತಂಡ ನದಿಯಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಲಪಾತದಿಂದ ಒಂದು ಕಿ.ಮೀ. ದೂರದಲ್ಲಿ ಕುಮಾರಧಾರ ನದಿಯ ಬದಿಯಲ್ಲಿ ಬಳ್ಳಿಯೊಂದಕ್ಕೆ ಸಿಲುಕಿಕೊಂಡಿದ್ದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಎರಡು ಕಿ.ಮೀ.ವರೆಗೆ ಕಾಲು ದಾರಿಯಲ್ಲಿ ಶವವನ್ನು ಸಾಗಿಸಿ, ನಂತರ ವಾಹನದಲ್ಲಿ ಸೋಮವಾರಪೇಟೆ ಶವಗಾರಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಕಳೆದ ಎರಡು ದಿನಗಳಿಂದ ಆ ಭಾಗದಲ್ಲಿ ಮಳೆ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಮೃತದೇಹ ಶೋಧಕ್ಕೆ ಅಡಚಣೆಯಾಗಲಿಲ್ಲ ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.

ಸ್ಥಳೀಯರಾದ ಪೊನ್ನಪ್ಪ, ನಿಖಿಲ್, ಸೋಮವಾರಪೇಟೆ ಆಟೋ ಚಾಲಕ ಹಸನಬ್ಬ, ಪೊಲೀಸ್ ಸಿಬ್ಬಂದಿಗಳಾದ ಶಿವಕುಮಾರ್, ಜಗದೀಶ್, ಕುಮಾರ್, ಸಿದ್ದರಾಮ ಅವರುಗಳು ಶವದ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು.

ಮುಳುಗುತಜ್ಞ ರಾದ ಹುಣಸೂರಿನ ಫಕೀರಪ್ಪ, ಕುಶಾಲನಗರದ ರಾಮಕೃಷ್ಣ, ಗರಗಂದೂರಿನ ಲತೀಪ್ ಅವರು ಕಳೆದ ನಾಲ್ಕು ದಿನಗಳ ಕಾಲ ಜಲಪಾತದ ಬಂಡೆಗಳನ್ನು ಇಳಿದು ಹುಡುಕಾಟ ನಡೆಸಿದ್ದರು. ಆದರೂ ಮೃತದೇಹದ ಸುಳಿವು ಸಿಕ್ಕಿರಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News