ನಾಲ್ಕೂವರೆ ಗಂಟೆಗಳಲ್ಲಿ ಸಬ್-ವೇ ಕ್ರಾಸಿಂಗ್ ನಿರ್ಮಿಸಿದ ಭಾರತೀಯ ರೈಲ್ವೆ

Update: 2018-07-06 11:33 GMT

ಹೈದರಾಬಾದ್, ಜು. 6: ಆಂಧ್ರ ಪ್ರದೇಶದ ಪೆಂಡುರ್ತಿ ಮತ್ತು ಕೊಟ್ಟವಲಸ ನಡುವೆ ಸಬ್-ವೇ ಕ್ರಾಸಿಂಗ್ ಒಂದನ್ನು ಭಾರತೀಯ ರೈಲ್ವೆ ಕೆಲ ತಿಂಗಳುಗಳ ಹಿಂದೆ  ನಾಲ್ಕೂವರೆ ಗಂಟೆಗಳಲ್ಲಿ ನಿರ್ಮಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದು, ರೈಲ್ವೆಗೆ ಪ್ರಶಂಸೆಯೆ ಸುರಿಮಳೆಯೇ ಹರಿದಿದೆ.

ಕೊಟ್ಟವಲಸ ಮತ್ತು ಪೆಂಡುರ್ತಿ ನಡುವೆ ಈ ಹಿಂದೆ ಇದ್ದ ಲೆವೆಲ್ ಕ್ರಾಸಿಂಗ್ ನಾಲ್ಕು ಪಥಗಳ ಮಾನವ ಚಾಲಿತ ಲೆವೆಲ್ ಕ್ರಾಸಿಂಗ್ ಆಗಿತ್ತು. ‘‘ಇಲ್ಲಿ ಸಬ್ ವೇ ಕ್ರಾಸಿಂಗ್ ನಿರ್ಮಾಣ ಯೋಜನೆಗೆ 2016ರಲ್ಲಿ ಮಂಜೂರಾತಿ ದೊರಕಿದ್ದು ಕೆಲ ತಿಂಗಳುಗಳ ಹಿಂದೆ ಈ ಯೋಜನೆಯನ್ನು ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದು ವಿಶಾಖಪಟ್ಣಂ ಈಸ್ಟ್ ಕೋಸ್ಟ್ ರೈಲ್ವೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸಬ್-ವೇ ಕ್ರಾಸಿಂಗ್ ನಿರ್ಮಾಣ ಕಾರ್ಯಕ್ಕೆ ರೈಲ್ವೆಯು 16 ಹೆವಿ ಡ್ಯೂಟಿ ಜೆಸಿಬಿ, 3 ಹೆವಿ ಡ್ಯೂಟಿ ಕ್ರೇನ್ ಗಳು, 5 ಟಿಪ್ಪರುಗಳು, 1,000 ಮರಳು ಚೀಲಗಳು, ನಾಲ್ಕು ಹೈಡ್ರಾಮೆಶೀನುಗಳು, ಘನ ಜ್ಯಾಕ್ ಗಳು ಹಾಗೂ 300 ಸಿಬ್ಬಂದಿಗಳ ಸೇವೆಯನ್ನು ಉಪಯೋಗಿಸಿತ್ತು.

ಕಾಮಗಾರಿಗಾಗಿ ನೆಲವನ್ನು ಸಮತಟ್ಟುಗೊಳಿಸುವ ಕಾರ್ಯಕ್ಕೆ ಒಂದು ಗಂಟೆ ತಗಲಿದ್ದರೆ, 20 ಬಾಕ್ಸುಗಳ ಅಳವಡಿಕೆ ಹಾಗೂ ಟ್ರ್ಯಾಕ್ ಜೋಡಣೆಗೆ ಒಂದೂವರೆ ಗಂಟೆ ತಗಲಿತ್ತು. ಹೀಗೆ ಎಲ್ಲಾ ಕಾಮಗಾರಿ ನಾಲ್ಕೂವರೆ ಗಂಟೆಗಳಲ್ಲಿ ಪೂರ್ಣಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News