ಚಿಕ್ಕಮಗಳೂರು: ಮುಳ್ಳಯ್ಯನಗಿರಿಯಲ್ಲಿ ಜೀಪ್ ವ್ಯವಸ್ಥೆಗೆ ಅನುಮತಿ

Update: 2018-07-06 13:19 GMT

ಚಿಕ್ಕಮಗಳೂರು,ಜು.06: ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ಪ್ರದೇಶ ವೀಕ್ಷಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀಪ್ ವ್ಯವಸ್ಥೆಗೆ ಅನುಮತಿ ನೀಡಿದ್ದಾರೆ. 

ಮುಳ್ಳಯ್ಯಗಿರಿ ಸಾಗುವ ದಾರಿಯೂ ಕಿರಿದಾಗಿದ್ದು, ದೊಡ್ಡ ದೊಡ್ಡ ತಿರುವು ಹೊಂದಿದ್ದ ಕಾರಣಕ್ಕೆ ದೊಡ್ಡ ಬಸ್ ಸಂಚಾರವನ್ನು ನಿಷೇಧಿಸಲಾಗಿತ್ತು. ಪರವಾನಗಿ ಇಲ್ಲದೆ ಕೆಲ ಜೀಪ್ ಮಾಲಿಕರು ಜೀಪ್ ಒಡಿಸುತ್ತಾರೆಂಬ ದೂರುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ದೊಡ್ಡ ಬಸ್ ಮತ್ತು ಜೀಪ್ ಸಂಚಾರ ನಿಷೇದಿಸಲಾಗಿತ್ತು. 

ಶುಕ್ರವಾರ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಹೋಗಲು ಜೀಪ್‍ಗಳಿಗೆ ಎಸ್‍ಪಿ ಅಣ್ಣಾಮಲೈ ಅನುಮತಿ ನೀಡಿದ್ದು, ಸೀತಾಳಯ್ಯನಗಿರಿ ಮತ್ತು ಮುಳ್ಳಯ್ಯನಗಿರಿ ಪ್ರದೇಶ ವಿಕ್ಷಣೆಗೆ ಮಿನಿ ಬಸ್‍ನಲ್ಲಿ ಬರುವ ಪ್ರವಾಸಿಗರಿಗೆ ಜೀಪ್ ವ್ಯವಸ್ಥೆ ಕಲ್ಪಿಸಲಾಗಿದೆ.

ಓರ್ವ ಪ್ರವಾಸಿಗನಿಗೆ ಹೋಗಿ ಬರಲು 20 ರು. ದರ ನಿಗದಿ ಮಾಡಲಾಗಿದೆ. ಮುಳ್ಳಯ್ಯನಗಿರಿ ಪ್ರದೇಶಕ್ಕೆ ಜೀಪ್ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರವಾಸಿಗರಿಗೆ ಮತ್ತು ಜೀಪ್ ಮಾಲಿಕರಿಗೆ ಸಂತಸ ಮೂಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News