ಜು.8 ರಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ ಮೌಲ್ಯಮಾಪನ

Update: 2018-07-06 14:20 GMT

ಬೆಂಗಳೂರು, ಜು.6: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಜೂ.21 ರಿಂದ ನಡೆದಿದ್ದ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜು.8 ರಿಂದ ರಾಜ್ಯದ ಆಯ್ದ 8 ಕೇಂದ್ರಗಳಲ್ಲಿ ನಡೆಯಲಿದೆ.

ಈ ಸಂಬಂಧ ಈಗಾಗಲೇ ಮೌಲ್ಯಮಾಪಕರುಗಳಿಗೆ ಮಂಡಳಿಯಿಂದ ಆದೇಶಗಳನ್ನು ರವಾನಿಸಲಾಗಿದ್ದು, ಮಂಡಳಿಯಿಂದ ನಿಯೋಜಿಸಲಾಗಿರುವ ಎಲ್ಲ ಶಿಕ್ಷಕರುಗಳು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಈ ಬಾರಿ ಪ್ರಪ್ರಥಮವಾಗಿ ಆನ್‌ಲೈನ್‌ನಲ್ಲಿ ಅಂಕಗಳನ್ನು ನಮೂದು ಮಾಡಬೇಕಾಗಿರುವುದರಿಂದ ಪ್ರತಿಯೊಬ್ಬ ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯದ ಮೊದಲ ದಿನ ಆನ್‌ಲೈನ್ ನೋಂದಣಿ ಮಾಡಬೇಕಾಗಿರುತ್ತದೆ.

ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಶಿಕ್ಷಕರುಗಳಿಗೆ ಪ್ರಯಾಣ ಭತ್ತೆ, ದಿನಭತ್ತೆ ಹಾಗೂ ಸಂಭಾವನೆಯನ್ನು ಆನ್‌ಲೈನ್ ಮೂಲಕ ಶಿಕ್ಷಕರುಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ಈ ಎಲ್ಲಾ ಕಾರಣಕ್ಕಾಗಿ ಮೌಲ್ಯಮಾಪನ ಕಾರ್ಯಕ್ಕಾಗಿ ನಿಯೋಜಿಸಿರುವ ಎಲ್ಲರೂ ಬ್ಯಾಂಕ್ ಖಾತೆಯು ವಿವರಗಳುಳ್ಳ ಪಾಸ್ ಪುಸ್ತಕ ಅಥವಾ ಚೆಕ್ ಹಾಳೆಯ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಮೊದಲ ದಿನವೇ ತರಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News