ವರ್ಷಕ್ಕೆ ಎರಡು ಬಾರಿ ನೀಟ್, ಜೆಇಇ ಪರೀಕ್ಷೆ: ಕೇಂದ್ರ ಸಚಿವ ಜಾವಡೇಕರ್

Update: 2018-07-07 11:01 GMT

ಹೊಸದಿಲ್ಲಿ, ಜು.7: ನೀಟ್ ಹಾಗು ಜೆಇಇ ಪರೀಕ್ಷೆಗಳು ವರ್ಷದಲ್ಲಿ ಎರಡು ಬಾರಿ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಘೋಷಿಸಿದ್ದಾರೆ. ಫೆಬ್ರವರಿ ಹಾಗು ಮೇ ತಿಂಗಳಲ್ಲಿ ನೀಟ್ ಪರೀಕ್ಷೆ ನಡೆದರೆ, ಜೆಇಇ ಪರೀಕ್ಷೆ ಜನವರಿ ಹಾಗು ಎಪ್ರಿಲ್ ನಲ್ಲಿ ನಡೆಯಲಿದೆ.

ನೀಟ್, ಜೆಇಇ, ಎನ್ ಇಟಿ ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸಲಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ನೀಟ್ ಪರೀಕ್ಷೆಯನ್ನು ಬರೆಯಬಹುದು. ಅತ್ಯುತ್ತಮ ಅಂಕವನ್ನು ಪರಿಗಣಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News