ಕೆ. ಅಬ್ದುಲ್ಲಾ ಹಾಜಿ

Update: 2018-07-07 17:22 GMT

ಮಂಗಳೂರು, ಜು. 7: ಕೋಟೆಕಾರು ನಿವಾಸಿ ಕೆ. ಅಬ್ದುಲ್ಲಾ ಹಾಜಿ (85) ಅಸೌಖ್ಯದಿಂದ ಶನಿವಾರ ಮಧ್ಯಾಹ್ನ ತನ್ನ ಸ್ವಗೃಹದಲ್ಲಿ ನಿಧನರಾದರು.

ಇವರು ಅಬ್ದುಲ್ ಖಾದರ್ ಹಾಜಿ ಮೆಮೋರಿಯಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿ, ಕೋಟೆಕಾರು ಸಿದ್ದೀಕ್ ಜುಮಾ ಮಸೀದಿಯ ಅಧ್ಯಕ್ಷರಾಗಿ, ಕುಂಪಲ ನೂರಾನಿ ಯತಿಂಖಾನ ಉಪಾಧ್ಯಕ್ಷ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರ ಅಂತ್ಯಸಂಸ್ಕಾರವು ರವಿವಾರ ಬೆಳಗ್ಗೆ ಕೋಟೆಕಾರು ಸಿದ್ದಿಕ್ ಜುಮಾ ಮಸೀದಿಯ ವಠಾರದಲ್ಲಿ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ