ಮೀನುಗಳಲ್ಲಿ ಕ್ಯಾನ್ಸರ್ ಕಾರಕ ಫಾರ್ಮಾಲಿನ್ ಅಂಶದ ಪರೀಕ್ಷೆ ವರದಿ ಪಾಸಿಟಿವ್

Update: 2018-07-09 06:32 GMT

ಚೆನ್ನೈ, ಜು.9: ಇಲ್ಲಿನ ಪ್ರಮುಖ ಮಾರುಕಟ್ಟೆಗಳಾದ ಚಿಂತಾದ್ರಪೇಟೆ ಹಾಗು ಕಾಸಿಮೇಡುವಿನ ಮೀನು ಮಾರುಕಟ್ಟೆಯಲ್ಲಿ ಖರೀದಿಸಿದ ಮೀನುಗಳ 30 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 11 ಮಾದರಿಗಳ ವರದಿಯಲ್ಲಿ ಫಾರ್ಮಾಲಿನ್ ಪಾಸಿಟಿವ್ ಎಂದು ತೋರಿಸಿರುವುದಾಗಿ ವರದಿಯಾಗಿದೆ.

ಕ್ಯಾನ್ಸರ್ ಕಾರಕ ಈ ರಾಸಾಯನಿಕವನ್ನು ಮೀನುಗಳ ಹಾಳಾಗದಂತೆ ರಕ್ಷಿಸಲು ಬಳಸುತ್ತಾರೆ. ತಮಿಳುನಾಡಿನ ಡಾ.ಜಯಲಲಿತಾ ಫಿಶರೀಸ್ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಮೀನನ್ನು ಪರೀಕ್ಷಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ವಿವಿಯೊಂದರ ಪರಿಣಿತರು ಅಭಿವೃದ್ಧಿಪಡಿಸಿದ ಕಡಿಮೆ ವೆಚ್ಚದ ಫಾರ್ಮಾಲಿನ್ ಪತ್ತೆ ಕಿಟ್ ಅನ್ನು ಪರೀಕ್ಷೆಯಲ್ಲಿ ಬಳಸಲಾಗಿದೆ. ಜುಲೈ 4 ಹಾಗು 8ರಂದು ಮೀನುಗಳನ್ನು ಪರೀಕ್ಷಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News