ತಾಜ್ ಮಹಲ್ ರಕ್ಷಣೆಗೆ ಕ್ರಮ ಕೈಗೊಳ್ಳದ ಕೇಂದ್ರ, ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಛೀಮಾರಿ

Update: 2018-07-11 08:59 GMT

ಹೊಸದಿಲ್ಲಿ, ಜು.11: ತಾಜ್ ಮಹಲ್ ರಕ್ಷಣೆ ವಿಚಾರದಲ್ಲಿ ಕೇಂದ್ರ ಸರಕಾರ ಹಾಗು ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಐತಿಹಾಸಿಕ ಸ್ಮಾರಕದ ಸಂರಕ್ಷಣೆಯನ್ನು 'ವ್ಯರ್ಥ ಹೋರಾಟ' ಎಂದು ಅದು ಬಣ್ಣಿಸಿದೆ.

ಇಷ್ಟೇ ಅಲ್ಲದೆ ತಾಜ್ ಮಹಲ್ ರಕ್ಷಣೆಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ಇದೇ ಸಂದರ್ಭ ಛೀಮಾರಿ ಹಾಕಿತು. ಐತಿಹಾಸಿಕ ಸ್ಮಾರಕದ ರಕ್ಷಣೆಗೆ ತೆಗೆದುಕೊಂಡ ಹಾಗು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ನೀಡುವಂತೆಯೂ ಸುಪ್ರೀಂ ಕೋರ್ಟ್ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News