ಬಿ ಎಸ್ ಎನ್ಎಲ್ ನಿಂದ ಇಂಟರ್ ನೆಟ್ ಆಧಾರಿತ ಕರೆ ಸೌಲಭ್ಯಕ್ಕೆ ಚಾಲನೆ

Update: 2018-07-11 09:12 GMT

ಹೊಸದಿಲ್ಲಿ, ಜು. 11:ಸರಕಾರಿ ಸ್ವಾಮ್ಯದ  ಟೆಲಿಕಾಂ ಕಂಪೆನಿ ಬಿಎಸ್ಎನ್ಎಲ್ ಮೊದಲ ಬಾರಿಗೆ ಇಂಟರ್ ನೆಟ್ ಆಧಾರಿತ ದೂರವಾಣಿ  ಸೇವೆಯನ್ನು ಪ್ರಕಟಿಸಿದ್ದು. ಬಿಎಸ್ ಎನ್ ಎಲ್ ಮೊಬೈಲ್  ಆ್ಯಪ್   ಬಳಸಿ  ಯಾವುದೇ ಫೋನ್ ನಂಬರಿಗೂ ಕರೆ  ಮಾಡಬಹುದಾಗಿದೆ,
ಇನ್ನು  ಬಿಎಸ್ಎನ್ಎಲ್ ಗ್ರಾಹಕರು ಕಂಪೆನಿಯ ಮೊಬೈಲ್ ಅಪ್ಲಿಕೇಶನ್ "ವಿಂಗ್ಸ್" ಅನ್ನುಬಳಸಿ  ದೇಶದಲ್ಲಿ  ಯಾವುದೇ ಫೋನ್ ಸಂಖ್ಯೆಗೆ ಕರೆ ಮಾಡಲು  ಅವಕಾಶ ಇದೆ. ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ  ಬಿಎಸ್ ಎನ್ ಎಲ್ ನ ನೂತನ  ಸೇವೆಯನ್ನು ಬುಧವಾರ ಉದ್ಘಾಟಿಸಿದರು..
ಇದಕ್ಕೂ ಮೊದಲು , ಮೊಬೈಲ್  ಆ್ಯಪ್ ಮೂಲಕ  ಫೋನ್ ಕರೆಗಳು  ನಿರ್ದಿಷ್ಟ  ಆ್ಯಪ್ ಬಳಕೆದಾರರೊಳಗೆ  ಮಾತ್ರ ಸೀಮಿತವಾಗಿತ್ತು.
ಈ ಸೇವೆಯ ಮೂಲಕ, ಬಿಎಸ್ ಎನ್ ಎಲ್  ಗ್ರಾಹಕರು ಬಿಎಸ್ ಎನ್ ಎಲ್ ವೈಫೈ  ಮೂಲಕ ಯಾವುದೇ  ಯಾವುದೇ ನಂಬರಿಗೂ  ಕರೆ ಮಾಡಲು ಸಾಧ್ಯವಿದೆ.
ಈ ಸೇವೆಗೆ ನೋಂದಣಿ ಈ ವಾರ  ಆರಂಭಗೊಳ್ಳಲಿದೆ  ಮತ್ತು ಸೇವೆ ಜುಲೈ 25ರ ಬಳಿಕ  ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News