ಆನ್ ಲೈನ್ ಆಂದೋಲನದ ನಂತರ ವಿಷಾದ ವ್ಯಕ್ತಪಡಿಸಿದ ಕೇಂದ್ರ ಸಚಿವ ಜಯಂತ್ ಸಿನ್ಹಾ

Update: 2018-07-11 11:17 GMT

ಹೊಸದಿಲ್ಲಿ, ಜು.11: ಹಾರ್ವರ್ಡ್ ಹಳೆ ವಿದ್ಯಾರ್ಥಿ ಸ್ಥಾನದಿಂದ ಕೇಂದ್ರ ಸಚಿವರ ಹೆಸರನ್ನು ತೆಗೆಯಬೇಕು ಎನ್ನುವ ಆಂದೋಲನ ಭಾರೀ ಪ್ರಚಾರ ಪಡೆದುಕೊಂಡ ನಡುವೆ, ರಾಮ್ ಗರ್ ಪ್ರಕರಣದ ಆರೋಪಿಗಳಿಗೆ ಹೂಹಾರ ಹಾಕಿ ಸನ್ಮಾನಿಸಿದ ಘಟನೆಯು ತಾನು ಹತ್ಯೆಗಳನ್ನು ಬೆಂಬಲಿಸುತ್ತೇನೆ ಎನ್ನುವ ಭಾವನೆಯನ್ನು ಸೃಷ್ಟಿಸಿದರೆ ತಾನು ಆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

ಗೋಸಾಗಾಟ ಶಂಕೆಯಲ್ಲಿ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆಗೈದ ಪ್ರಕರಣದ ಆರೋಪಿಗಳನ್ನು ಜಯಂತ್ ಸಿನ್ಹಾ ಸ್ವಾಗತಿಸಿದ ಘಟನೆ ಭಾರೀ ವಿವಾದ ಸೃಷ್ಟಿಸಿತ್ತು.

"ಕಾನೂನು ಅದರಲ್ಲೇ ಆದ ಹಾದಿಯಲ್ಲಿ ಸಾಗುತ್ತದೆ ಎಂದು ನಾನು ಈ ಹಿಂದೆಯೂ ಹೇಳಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಹಾಗು ಅಮಾಯಕರು ಪಾರಾಗುತ್ತಾರೆ. ಅವರನ್ನು (ರಾಮ್ ಗರ್ ಹತ್ಯೆ ಪ್ರಕರಣದ ಆರೋಪಿಗಳನ್ನು) ಹೂಮಾಲೆ ಹಾಕಿ ಸ್ವಾಗತಿಸುವುದು ನಾನು ಹತ್ಯೆಯನ್ನು ಬೆಂಬಲಿಸುತ್ತೇನೆ ಎಂಬ ಭಾವನೆ ಸೃಷ್ಟಿಸಿದ್ದಲ್ಲಿ ನಾನು ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಜಯಂತ್ ಹೇಳಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News