ರೋಹಿತ್ ಶತಕ: ಭಾರತಕ್ಕೆ ಜಯ

Update: 2018-07-12 18:31 GMT

   ನಾಟಿಂಗ್‌ಹ್ಯಾಮ್, ಜು.12: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಜಯ ಗಳಿಸಿದೆ.

ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 269 ರನ್ ಗಳಿಸಬೇಕಿದ್ದ ಭಾರತ ಇನ್ನೂ59 ಎಸೆತಗಳು ಬಾಕಿ ಇರುವಾಗಲೇ 2ವಿಕೆಟ್ ನಷ್ಟದಲ್ಲಿ 269 ರನ್ ಗಳಿಸಿತು. ಆರಂಭಿಕ ದಾಂಡಿಗ ರೋಹಿತ್ ಶರ್ಮ ಔಟಾಗದೆ 137 ರನ್(114ಎ,15ಬೌ,4 ಸಿ) ಮತ್ತು ಲೋಕೇಶ್ ರಾಹುಲ್ ಔಟಾಗದೆ 9 ರನ್ ಗಳಿಸಿದರು.

  ನಾಯಕ ವಿರಾಟ್ ಕೊಹ್ಲಿ 75 ರನ್(82ಎ, 7ಬೌ,  ) , ಶಿಖರ್ ಧವನ್ 40 ರನ್(27ಎ, 8ಬೌ) ಗಳಿಸಿ ತಂಡದ ಗೆಲುವಿಗೆ ನೆರವಾದರು. ರೋಹಿತ್ ಮತ್ತು ಕೊಹ್ಲಿ 2ನೇ ವಿಕೆಟ್‌ಗೆ 157 ರನ್‌ಗಳ ಜೊತೆಯಾಟ ನೀಡಿದರು. ರೋಹಿತ್ ಶರ್ಮ 18ನೇ ಶತಕ ದಾಖಲಿಸಿದರು. ರೋಹಿತ್ ತನ್ನ 181ನೇ ಏಕದಿನ ಪಂದ್ಯದಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.
  ಇಂಗ್ಲೆಂಡ್ 268: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ 49.5 ಓವರ್‌ಗಳಲ್ಲಿ 268 ರನ್‌ಗಳಿಗೆ ಆಲೌಟಾಗಿತ್ತು.
  ಬೆನ್ ಸ್ಟೋಕ್ಸ್ (50) ಮತ್ತು ಜೋಸ್ ಬಟ್ಲರ್(53) ಅವರ ಅರ್ಧಶತಕಗಳ ನೆರವಿನಲ್ಲಿ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
 ಜೇಸನ್ ರಾಯ್ (38), ಜೋನಿ ಬೈರ್‌ಸ್ಟೋವ್ (38), ನಾಯಕ ಇಯಾನ್ ಮೊರ್ಗನ್(19), ಮೊಹಿನ್ ಅಲಿ(24),ಆದಿಲ್ ರಶೀದ್(22), ಲಿಯಾಮ್ ಪ್ಲೆಂಕೆಟ್(10) ಎರಡಂಕೆಯ ಸ್ಕೋರ್ ದಾಖಲಿಸಿದರು.
 ಜೋ ರೂಟ್ 3ರನ್ ಮತ್ತು ಡೇವಿಡ್ ವಿಲ್ಲಿ 1 ರನ್ ಗಳಿಸಿದರು.
  ಕುಲ್‌ದೀಪ್ ದಾಖಲೆ: ಭಾರತದ ಕುಲ್‌ದೀಪ್ ಯಾದವ್ 25ಕ್ಕೆ 6 ವಿಕೆಟ್ ಪಡೆಯುವ ಮೂಲಕ ಜೀವನ ಶೇಷ್ಠ ಸಾಧನೆ ಮಾಡಿದರು. 2007ರಲ್ಲಿ ಮುರಳಿ ಕಾರ್ತಿಕ್(27ಕ್ಕೆ6) ಆಸ್ಟ್ರೇಲಿಯ ವಿರುದ್ಧ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಇಂಗ್ಲೆಂಡ್ ವಿರುದ್ಧ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ 11ಕ್ಕೆ 5 ವಿಕೆಟ್ ಪಡೆದು ಇಂಗ್ಲೆಂಡ್ ವಿರುದ್ಧ ದಾಖಲೆ ನಿರ್ಮಿಸಿದ್ದರು.ಈ ದಾಖಲೆಯನ್ನು ಕುಲದೀಪ್ ಮುರಿದಿದ್ದಾರೆ. ಉಮೇಶ್ ಯಾದವ್ 70ಕ್ಕೆ 2 ಮತ್ತು ಯಜುವೇಂದ್ರ ಚಹಾಲ್ 51ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News