ಹೆದ್ದಾರಿ ನರಕ

Update: 2018-07-13 18:30 GMT

ಮಾನ್ಯರೇ

ರಾಜ್ಯದ ಕರಾವಳಿಯ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಅರೆ ಕಾಮಗಾರಿಯಿಂದಾಗಿ ಹೆದ್ದಾರಿಯಾದ್ಯಂತ ಪ್ರತಿನಿತ್ಯ ಅಪಘಾತಗಳಾಗುತ್ತಿವೆ. ಕಾಮಗಾರಿ ವ್ಯವಸ್ಥಿತವಾಗದೆ ಮಳೆಗಾಲದಲ್ಲಿ ಹಲವು ಕಡೆ ರಸ್ತೆಯಲ್ಲೇ ನೀರು ನಿಲ್ಲುತ್ತಿದ್ದು, ವಾಹನಸವಾರರಿಗೆ ಯಮಸದೃಶವಾಗಿದೆ. ಈ ರಸ್ತೆಯ ಬಗ್ಗೆ ನಿಗಾ ಇಡಬೇಕಾದ ಉಭಯ ಜಿಲ್ಲೆಯ ಜನಪ್ರತಿನಿಧಿಗಳು ಇದುವರೆಗೆ ವೌನವಾಗಿದ್ದು, ಈಗ ಮುಂದಿನ ಚುನಾವಣೆಯ ಹಿನ್ನಲೆಯಲ್ಲಿ ಉದ್ದುದ್ದ ಹೇಳಿಕೆಗಳನ್ನಷ್ಟೇ ಕೊಡುತ್ತಿದ್ದಾರೆ. ಆದರೂ ಕಾಮಗಾರಿ ನಿಂತಲ್ಲೇ ಇದೆ. ಪಂಪ್‌ವೆಲ್, ಪಡುಬಿದ್ರೆಯಂತಹ ಕಡೆ ಹೆಚ್ಚು ಮಳೆ ಬಂದರೆ ಸಾರ್ವಜನಿಕ ಸಾರಿಗೆ ವಾಹನಗಳು ತಮ್ಮ ಸಂಚಾರವನ್ನೇ ನಿಲ್ಲಿಸುವಂತಾಗಿದೆ. ಈ ಹೆದ್ದಾರಿ ಬವಣೆಗೆ ಮುಕ್ತಿ ದೊರಕಿಸಿಕೊಡುವವರು ಯಾರು?

Writer - -ಗಣೇಶ್ ನಾಯಕ್, ಮೂಲ್ಕಿ

contributor

Editor - -ಗಣೇಶ್ ನಾಯಕ್, ಮೂಲ್ಕಿ

contributor

Similar News