ಬಿಜೆಪಿ 'ಮೇಕ್ ಇನ್ ಇಂಡಿಯಾ'ಗೆ ರಾಯಭಾರಿಯಾಗಿ ವಿಜಯ್ ಮಲ್ಯರನ್ನು ನೇಮಿಸಲಿ: ಶಿವಸೇನೆ

Update: 2018-07-16 08:47 GMT

ಮುಂಬೈ, ಜು.16: ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ಸಾಲ ಬಾಕಿಯಿರಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯರನ್ನು, 'ಸ್ಮಾರ್ಟ್' ಎಂದಿದ್ದಕ್ಕಾಗಿ ಬಿಜೆಪಿ ನಾಯಕ ಜುವಾಲ್ ಒರಾಮ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ಶಿವಸೇನೆ ಬಿಜೆಪಿಯು ತನ್ನ 'ಮೇಕ್ ಇನ್ ಇಂಡಿಯಾ' ಹಾಗು 'ಸ್ಟಾರ್ಟ್ ಅಪ್ ಇಂಡಿಯಾ'ಗೆ ಮಲ್ಯರನ್ನು ರಾಯಭಾರಿಯಾಗಿ ನೇಮಿಸಬೇಕು ಎಂದಿದೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ಮಾತನಾಡುತ್ತಾರೆ.. ಆದರೆ ಮತ್ತೊಂದೆಡೆ ಹಣ ಬಾಕಿಯಿರಿಸಿ ಪರಾರಿಯಾಗಿರುವವರನ್ನು ಬಿಜೆಪಿಯ ನಾಯಕರು ಮಾದರಿಯೆಂದು ಪರಿಗಣಿಸುತ್ತಾರೆ" ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.

"ಬಿಜೆಪಿಯ ನಿಜವಾದ ಮುಖವನ್ನು ಒರಾಮ್ ಜನರಿಗೆ ತೋರಿಸಿದ್ದಾರೆ. ಮುಸ್ಲಿಮರ ಬಗ್ಗೆ ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಅವರ ಅಭಿಪ್ರಾಯಗಳನ್ನು ಕೇಳುವವರು ಬಿಜೆಪಿಯ ಹೊಸ ರಾಯಭಾರಿ ವಿಜಯ್ ಮಲ್ಯ ಬಗ್ಗೆ ಮಾತನಾಡಲಿ ಎಂದು ಶಿವಸೇನೆ ಕುಟುಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News