ಆಭರಣಗಳ ಪ್ರದರ್ಶನ ಬೇಕೇ?

Update: 2018-07-16 18:31 GMT

ಮಾನ್ಯರೇ,

ವರ್ಷದ ಹಿಂದೆ ಕೆಲವು ತರುಣರು ದ್ವಿಚಕ್ರ ವಾಹನಗಳಲ್ಲಿ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಆಭರಣಗಳನ್ನು ಸೆಳೆದುಕೊಂಡು ಹೋಗುವ ಪ್ರಕರಣಗಳು ಹೆಚ್ಚಾಗಿದ್ದವು. ಆನಂತರ ಸಂಬಂಧಿತ ಇಲಾಖೆಯ ಕಠಿಣ ಪ್ರಯತ್ನದಿಂದ ಇಂತಹ ಪ್ರಕರಣಗಳಿಗೆ ಬ್ರೇಕ್ ಬಿದ್ದಿದ್ದವು. ಆದರೆ ಇತ್ತೀಚೆಗೆ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಮತ್ತೆ ಮಹಿಳೆಯರು ಚಿಂತೆಗೀಡಾಗುವಂತೆ ಮಾಡಿದೆ.
ಹೀಗಾಗಿ ಮಹಿಳೆಯರೇ ತಮ್ಮ ಆಭರಣಗಳು ಕಳವಾಗದಂತೆ ಜಾಗ್ರತೆ ವಹಿಸಿದರೆ ಮಾತ್ರ ಇಂತಹ ಪ್ರಕರಣಗಳು ನಿಲ್ಲಬಹುದು.
ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ನಡೆಯುವ ಸಂದರ್ಭದಲ್ಲಿ ಚಿನ್ನದ ಆಭರಣಗಳನ್ನು ಹಾಕಿಕೊಳ್ಳದಿರುವುದೇ ಲೇಸು. ಬದಲಾಗಿ ಕೃತಕ ಆಭರಣಗಳನ್ನು ಧರಿಸಿಕೊಂಡು ಓಡಾಡಿದರೆ ಒಂದೊಮ್ಮೆ ಕಳ್ಳರು ಸೆಳೆದರೂ ಅವರಿಗೆ ಅದರಿಂದೇನು ಉಪಯೋಗವಾಗದು. ಇದರಿಂದ ಬೇಸ್ತು ಬೀಳುವ ಕಳ್ಳರು ತಮ್ಮ ಚಾಳಿ ನಿಲ್ಲಿಸಿಯಾರು. ಅದನ್ನು ಬಿಟ್ಟು ಪ್ರದರ್ಶನಕ್ಕಾಗಿ ಚಿನ್ನಾಭರಣ ಹಾಕಿಕೊಂಡರೆ ಕಳ್ಳತನಕ್ಕೆ ನಾವೇ ಹಾದಿ ಮಾಡಿ ಕೊಟ್ಟಂತಲ್ಲವೇ?

Writer - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Editor - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Similar News