ತುಮಕೂರು: ರಸ್ತೆ ಅಪಘಾತಕ್ಕೆ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತ್ಯು

Update: 2018-07-17 04:32 GMT

ತುಮಕೂರು, ಜು. 17: ಲಾರಿ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು - ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. 

ಮೃತರನ್ನು ಚಾಲಕ ಕೆ.ಆರ್. ನಗರದ ಲೋಕೇಶ್ (34), ಹನುಮಂತರಾಜು (40) ಹಾಗು ರಾಧಾ (35) ಎಂದು ಗುರುತಿಸಲಾಗಿದೆ.

ಕಳ್ಳಬೆಳ್ಳ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News