ಆಗಸದಲ್ಲಿ ಢಿಕ್ಕಿ ಹೊಡೆದ ವಿಮಾನಗಳು: ಭಾರತೀಯ ಮೂಲದ ಯುವತಿ ಸೇರಿ ಮೂವರು ಮೃತ್ಯು

Update: 2018-07-18 09:28 GMT

ಫ್ಲೋರಿಡಾ, ಜು.18: ಎರಡು ಮಿನಿ ವಿಮಾನಗಳು ಆಗಸದಲ್ಲಿ ಢಿಕ್ಕಿ ಹೊಡೆದು ಸಂಭವಿಸಿದ ಅವಘಡದಲ್ಲಿ ಒಬ್ಬ ಭಾರತೀಯ ಮೂಲದ ಯುವತಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ 19 ವರ್ಷದ ನಿಶಾ ಸೇಜ್ವಲ್, 22 ವರ್ಷದ ಸ್ಯಾಂಚೆಝ್, 72 ವರ್ಷದ ರಾಲ್ಫ್ ನೈಟ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದು ಡೀನ್ ಇಂಟರ್ ನ್ಯಾಶನಲ್ ಫ್ಲೈಟ್ ಸ್ಕೂಲ್ ಗೆ ಸೇರಿದ ವಿಮಾನಗಳಾಗಿವೆ.

ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಪೊಲೀಸರು ನಿಶಾಳ ವಿವರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News