10 ಭಾಷೆಗಳಲ್ಲಿ ಮಾತನಾಡಿ ದಾಖಲೆ ನಿರ್ಮಿಸಿದ ಉಪರಾಷ್ಟ್ರಪತಿ ನಾಯ್ಡು !

Update: 2018-07-19 05:11 GMT

ಹೊಸದಿಲ್ಲಿ, ಜು.19: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಬುಧವಾರ ಆರಂಭಗೊಂಡ ಮುಂಗಾರು ಅಧಿವೇಶನದಲ್ಲಿ 10 ಭಾಷೆಗಳಲ್ಲಿ ಮಾತನಾಡಿ ದಾಖಲೆ ನಿರ್ಮಿಸಿದ್ದಾರೆ.

ವೆಂಕಯ್ಯ ನಾಯ್ಡು ಅವರು ರಾಜ್ಯ ಸಭೆಯಲ್ಲಿ ಇನ್ನೂ 22 ಭಾಷೆಗಳಲ್ಲಿ ಮಾತನಾಡಬಹುದು ಎಂದು ಪ್ರಕಟಿಸಿರು. ಈ ವೇಳೆ ಅವರು  ಬಂಗಾಳಿ, ಗುಜರಾತ್ , ಕನ್ನಡ, ಮಲಯಾಲಂ, ಮರಾಠಿ, ನೇಪಾಳಿ, ಒರಿಯ, ಪಂಜಾಬಿ, ತಮಿಳು ಮತ್ತು ತೆಲುಗು ಸೇರಿದಂತೆ 10 ಭಾಷೆಗಳಲ್ಲಿ  ಅವರು ಮಾತನಾಡಿದರು.   

ರಾಜ್ಯಸಭೆಯಲ್ಲಿ ಈ ಮೊದಲು ರಾಜ್ಯಸಭೆಯಲ್ಲಿ ಅಸ್ಸಾಮೀ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ,  ಒರಿಯಾ, ಪಂಜಾಬಿ, ತಮಿಳು , ತೆಲುಗು , ಉರ್ದು ಸೇರಿದಂತೆ 17 ಭಾಷೆಗಳಲ್ಲಿ ಮಾತನಾಡುವ ಅವಕಾಶ ಇತ್ತು.  ಇದೀಗ ಹೆಚ್ಚುವರಿಯಾಗಿ   ದೋಗ್ರಿ, ಕಾಶ್ಮೀರಿ, ಕೊಂಕಣಿ, ಸಾಂಥಾಲಿ ಮತ್ತು ಸಿಂಧಿ ಭಾಷೆಗಳ ಸೇರ್ಪಡೆಯಾಗಿದೆ ಆದರೆ ಸದಸ್ಯರು ಮಾತನಾಡುವಾಗ ಸಚಿವಾಲಯದ ಗಮನಕ್ಕೆ ತರಬೇಕಾಗುತ್ತದೆ ಎಂದು ನಾಯ್ಡು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News