2014-16ರ ಅವಧಿಯಲ್ಲಿ 1.10 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲು: ಕೇಂದ್ರ ಸಚಿವ ರಿಜಿಜು

Update: 2018-07-19 09:28 GMT

ಹೊಸದಿಲ್ಲಿ, ಜು.19: 2014ರಿಂ 2016 ಅವಧಿಯಲ್ಲಿ ದೇಶಾದ್ಯಂತ 1,10,333 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದ್ದಾರೆ.

2016ರಲ್ಲಿ 38,947 ಪ್ರಕರಣಗಳು ದಾಖಲಾಗಿದ್ದು, 2015ರಲ್ಲಿ 34,651 ಹಾಗು 2016ರಲ್ಲಿ 36,735 ಪ್ರಕರಣಗಳು ದಾಖಲಾಗಿವೆ ಎಂದು ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ. 2016ರಲ್ಲಿ ಮಹಿಳೆಯರ ವಿರುದ್ಧದ 3,38,954 ಅಪರಾಧ ಪ್ರಕರಣಗಳು, 2015ರಲ್ಲಿ 3,29,243 ಮತ್ತು 2014ರಲ್ಲಿ 3,39,457 ಪ್ರಕರಣಗಳು ದಾಖಲಾಗಿವೆ ಎಂದವರು ತಿಳಿಸಿದರು.

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ತಡೆಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರಕಾರವು ಈಗಾಗಲೇ ರಾಜ್ಯಗಳಿಗೆ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ ಎಂದವರು ಇದೇ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News