ಕೆಲಸಕ್ಕೆ ಹಾಜರಾದ ಮೊದಲ ದಿನವೇ ಯುವಕನಿಗೆ ಕಾರು ಉಡುಗೊರೆ ನೀಡಿದ ಕಂಪೆನಿ

Update: 2018-07-19 10:52 GMT

ಅಲಬಾಮ, ಜು.19:  ತನ್ನ ಉದ್ಯೋಗ ಸ್ಥಳಕ್ಕೆ ಮೊದಲ ದಿನದಂದು ಸಮಯಕ್ಕೆ ಸರಿಯಾಗಿ ತಲುಪಬೇಕೆಂಬ ಜವಾಬ್ದಾರಿಯಿಂದ 20 ಮೈಲಿ ದೂರ ನಡೆದುಕೊಂಡೇ ಬಂದ ಯುವಕನ ಕರ್ತವ್ಯನಿಷ್ಠೆಗೆ ಮೆಚ್ಚಿದ ಕಂಪೆನಿ ಆತನಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದೆ.

ಅಲಬಾಮದ ವಾಲ್ಟರ್ ಕಾರ್ರ್ ಎಂಬಾತ  ತಾನು ಹೊಸದಾಗಿ ಉದ್ಯೋಗ ಪಡೆದಿದ್ದ ಕಂಪೆನಿಗೆ ರವಿವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಹಿಂದಿನ ದಿನ ರಾತ್ರಿ ಆತನ ಕಾರು ಕೆಟ್ಟಿದೆ ಎಂದು ತಿಳಿಯುತ್ತಲೇ ಆತ ಮಧ್ಯರಾತ್ರಿಯಿಂದಲೇ ತಾನು ಉದ್ಯೋಗ ಪಡೆದ ಸಂಸ್ಥೆ ಬೆಲ್‍ಹಾಪ್ಸ್ ನತ್ತ ನಡೆಯಲು ಆರಂಭಿಸಿದ್ದ. ಆತನ ನಿವಾಸವಿರುವ ಹೋಮ್ ವುಡ್ ಪ್ರದೇಶದಿಂದ ಕಂಪೆನಿಯಿರುವ ಪೆಲ್ಹಮ್ ತನಕ ಆತ ನಡೆಯುತ್ತಿರುವುದನ್ನು ಮುಂಜಾನೆ ಹೊತ್ತಿಗೆ ನೋಡಿದ ಪೊಲೀಸರು ಆತನಿಗೆ ಉಪಾಹಾರ ನೀಡಿ ನಂತರ  ಆತ ಸೇರಬೇಕಾದ ಸ್ಥಳವನ್ನು ವಾಹನದಲ್ಲಿ ತಲುಪಿಸಿದ್ದರು. ಈ ವಿಚಾರ  ವಾಲ್ಟರ್ ಕಂಪೆನಿಯ ಸಿಇಒ ಲೂಕ್ ಮಾಕ್ರ್ಲಿನ್ ಕಿವಿಗೆ  ಬಿದ್ದಾಗ ಅವರು ತಮ್ಮ 2014 ಮಾಡೆಲ್ ನ ಫೋರ್ಡ್ ಎಸ್ಕೇಪ್ ಕಾರನ್ನು ಆತನಿಗೆ ಉಡುಗೊರೆಯಾಗಿ ನೀಡಿದ್ದಾರೆ.

ವಾಲ್ಟರ್ ನ ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News