ಏಶ್ಯನ್ ಗೇಮ್ಸ್‌ಗೆ ಹೀನಾ ಸಿಧು ತಯಾರಿ

Update: 2018-07-20 18:32 GMT

ಹೊಸದಿಲ್ಲಿ, ಜು.20: ವಿಶ್ವದ ಮಾಜಿ ನಂ.1 ಶೂಟರ್ ಹೀನಾ ಸಿಧು ಮುಂಬರುವ ಏಶ್ಯನ್ ಗೇಮ್ಸ್‌ಗೆ ಈಗಾಗಲೇ ತಯಾರಿ ನಡೆಸಲಾರಂಭಿಸಿದ್ದಾರೆ. ಮುಂದಿನ ತಿಂಗಳು ಜಕಾರ್ತದಲ್ಲಿ ನಡೆಯುವ ಏಶ್ಯನ್ ಗೇಮ್ಸ್‌ನತ್ತ ಚಿತ್ತವಿರಿಸಿರುವ ಸಿಧು ತನ್ನ ತಂತ್ರಗಾರಿಕೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವತ್ತ ಗಮನಹರಿಸಲು ನಿರ್ಧರಿಸಿದ್ದಾರೆ. ಹೀನಾ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಅವಳಿ ಪದಕ ಜಯಿಸಿದ್ದರು. 25 ಮೀ. ಸ್ಪೋರ್ಟ್ ಪಿಸ್ತೂಲ್‌ನಲ್ಲಿ ಚಿನ್ನ ಹಾಗೂ 10 ಮೀ. ಏರ್ ಪಿಸ್ತೂಲ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಹೀನಾ ಭೋಪಾಲ್‌ನಲ್ಲಿರುವ ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಅಕಾಡಮಿಯಲ್ಲಿ ದಿನಕ್ಕೆ 8ರಿಂದ 9 ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದಾರೆ.

10 ಮೀ.ಏರ್ ಪಿಸ್ತೂಲ್ ಇವೆಂಟ್‌ನಲ್ಲಿ ಸ್ಥಿರತೆ ಹಾಗೂ ಹೊಂದಾಣಿಕೆ, 25 ಮೀ. ಸ್ಪೋರ್ಟ್ ಪಿಸ್ತೂಲ್‌ನಲ್ಲಿ ಟೈಮಿಂಗ್ ಬಗ್ಗೆ ಹೀನಾ ಹೆಚ್ಚು ಗಮನ ನೀಡುತ್ತಿದ್ದಾರೆ. ಏಶ್ಯನ್ ಗೇಮ್ಸ್ ಆಗಸ್ಟ್ 18 ರಿಂದ ಸೆ.2ರ ತನಕ ಜಕಾರ್ತ ಹಾಗೂ ಪಾಲೆಂಬಂಗ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News