ಮೋದಿ ಸರಕಾರವನ್ನು ಬೆಂಬಲಿಸಲು ವಿಪ್ ಜಾರಿಗೊಳಿಸಿದ್ದು 'ತಪ್ಪು': ಶಿವಸೇನೆ

Update: 2018-07-21 10:50 GMT

ಹೊಸದಿಲ್ಲಿ, ಜು.21: ಅವಿಶ್ವಾಸ ನಿರ್ಣಯದ ವೇಳೆ ಲೋಕಸಭೆಯಲ್ಲಿ ಹಾಜರಿರುವಂತೆ ಹಾಗು ಸರಕಾರದ ಪರ ಮತ ಚಲಾಯಿಸುವಂತೆ ತನ್ನ ಸಂಸದರಿಗೆ ವಿಪ್ ಜಾರಿಗೊಳಿಸಿದ್ದು 'ತಪ್ಪು' ಎಂದು ಶಿವಸೇನೆ ಹೇಳಿದೆ.

"ತಪ್ಪು ನಡೆದಿದೆ. ಒಂದು ನಿರ್ಧಾರ ಇನ್ನೂ ತೆಗೆದುಕೊಳ್ಳದ ಹೊರತಾಗಿ ವಿಪ್ ಜಾರಿಗೊಳಿಸಬಾರದಿತ್ತು" ಎಂದು ಸೇನೆ ಹೇಳಿದೆ. ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯದಿಂದ ಶಿವಸೇನೆ ಅಂತರ ದೂರವುಳಿದಿದ್ದು, ಮತದಾನವನ್ನು ಬಹಿಷ್ಕರಿಸಿದ್ದಾಗಿ ಹೇಳಿತ್ತು.

ವಿಪ್ ಜಾರಿಗೊಳಿಸಿದ ಕೆಲ ಗಂಟೆಗಳಲ್ಲಿ ತನ್ನ ನಿರ್ಧಾರವನ್ನು ಶಿವಸೇನೆ ಬದಲಿಸಿತ್ತು. ಮೋದಿ ಸರಕಾರವನ್ನು ಬೆಂಬಲಿಸುವ ಬಗ್ಗೆ ಚರ್ಚೆ ಆರಂಭಕ್ಕೂ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಆದ್ದರಿಂದ ದಿಲ್ಲಿಯಲ್ಲೇ ಉಳಿದುಕೊಳ್ಳಬೇಕು ಎಂದು ಪಕ್ಷದ ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News