ಕುಶಾಲನಗರ: 2 ಲಕ್ಷ ರೂ. ಬೆಲೆಬಾಳುವ ಶ್ರೀಗಂಧ ವಶ; ಬೈಕ್ ಸಹಿತ ನಾಲ್ವರ ಬಂಧನ

Update: 2018-07-22 18:55 GMT

ಕುಶಾಲನಗರ, ಜು.22: ಶ್ರೀಗಂಧವನ್ನು ಸಾಗಿಸುತ್ತಿದ್ದ ನಾಲ್ವರನ್ನು ಕುಶಾಲನಗರ ಪೊಲೀಸರು ಬಂಧಿಸಿ ಅಪಾರ ಮೌಲ್ಯದ ಶ್ರೀಗಂಧವನ್ನು ರವಿವಾರ ವಶಕ್ಕೆ ಪಡೆದಿದ್ದಾರೆ.

ಮರೂರು ಗ್ರಾಮದ ಮಹೇಶ್ ಎಚ್.ಡಿ, 6ನೇ ಹೊಸ ಕೋಟೆಯ ಎಚ್.ಎನ್. ಪ್ರಕಾಶ್, ದೊಡ್ಡಬೆಟ್ಟಗೇರಿಯ ನಿವಾಸಿಗಳಾದ ಡಿ.ಎಸ್.ದೊರೆ ಹಾಗೂ ಚಂದ್ರ ಅಲಿ ಯಾಸ್ ಗುಂಡ ಬಂಧಿತರು. ಬಂಧಿತರಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಶ್ರೀಗಂಧದ ತುಂಡುಗಖಳು ಮತ್ತು ಸಾಗಾಟಕ್ಕೆ ಬಳಸಿದ ಸುಮಾರು 50 ಸಾವಿರ ರೂ. ವೌಲ್ಯದ ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು, 9.100 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳನ್ನು ಕುಶಾಲನಗರದ ಇಂಡಸ್ಟ್ರಿಯಲ್ ಏರಿಯಾ ರಸ್ತೆಯಲ್ಲಿ ದಾಳಿ ನಡೆಸಿದ ಪೊಲೀಸರು, ಶ್ರೀಗಂಧ ಹಾಗೂ ಬೈಕ್ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಮ್.ಎಸ್.ಚಿಣ್ಣಪ್ಪ ಅವರ ನಿರ್ದೇಶನದಂತೆ ಕುಶಾಲನಗರ ವಲಯ ಅರಣ್ಯಾಧಿಕಾರಿಗಳಾದ ಅರುಣ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದ ಉಪವಲಯಾರಣ್ಯಾಧಿಕಾರಿಗಳಾದ ಅನಿಲ್ ಡಿಸೋಜಾ, ಕೆ.ಪಿ.ರಂಜನ್, ಸುಬ್ರಮಣಿ, ಅರಣ್ಯ ರಕ್ಷಕರಾದ ಪುನಿತ್, ಸಿ.ಎನ್. ಪೂಣಚ್ಚ, ದಿನೇಶ್, ಸಿಬ್ಬಂದಿಗಳಾದ ಮೇದಪ್ಪ, ರವಿ, ಮನೋಜ್, ಕರ್ಣಸ್ವಾಮಿ, ಪದ್ಮನಾಭ, ಪೂವಪ್ಪ, ಪೊನ್ನಪ್ಪ, ಸಿದ್ದ, ಚಾಲಕ ಸತೀಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News