ಅಧಿವೇಶನದ ನಂತರ ಹೋಗಿದ್ದರೆ ಆಕಾಶ ಕೆಳಕ್ಕೆ ಬೀಳುತ್ತಿರಲಿಲ್ಲ

Update: 2018-07-25 14:51 GMT

ಹೊಸದಿಲ್ಲಿ, ಜು.25: ಪಕ್ಷದಲ್ಲಿದ್ದುಕೊಂಡೇ ಪ್ರಧಾನಿ ಮೋದಿಯವರ ಕೆಲ ನಡೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ, ಅಧಿವೇಶನದ ಸಮಯದಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪ್ರೀತಿಯ ಸರ್ ! ಎಂದಿನಂತೆ ಪಾರ್ಲಿಮೆಂಟ್ ಅಧಿವೇಶನ ನಡೆಯುವಾಗ ನೀವು 3 ಆಫ್ರಿಕನ್ ದೇಶಗಳ ಪ್ರವಾಸದಲ್ಲಿದ್ದೀರಿ. ಅಧಿವೇಶನದ ನಂತರ ಹೋಗಿದ್ದರೆ ಆಕಾಶವೇನೂ ಕೆಳಕ್ಕೆ ಬೀಳುತ್ತಿರಲಿಲ್ಲ. ಜಗತ್ತಿನಲ್ಲಿ ಬಿಟ್ಟು ಹೋದ ಉಳಿದ ದೇಶಗಳಿಗೂ ನೀವು ಭೇಟಿ ನೀಡಬಹುದಿತ್ತು. ಭಾರತದ ಪ್ರಧಾನಿಯೊಬ್ಬರು ರುವಾಂಡಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು, ಅಭಿನಂದನೆಗಳು” ಎಂದು ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.

ರುವಾಂಡಕ್ಕೆ ಪ್ರಧಾನಿ ಮೋದಿ, 200 ಗೋವುಗಳನ್ನು ನೀಡಿರುವ ಬಗ್ಗೆಯೂ ಉಲ್ಲೇಖೀಸಿರುವ ಅವರು, “ರುವಾಂಡಕ್ಕೆ 200 ಹಸುಗಳನ್ನು ನೀಡಿದ ಕ್ರಮ ಚಿಂತನಶೀಲವಾದದ್ದು. ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಇದು ಗಟ್ಟಿಗೊಳಿಸಬಹುದು. ಆದರೆ ಸರ್ ! ನೀವು ಹಿಂದಿರುಗುವಾಗ ಗೋರಕ್ಷಕರಿಂದ ನಡೆದ ಹತ್ಯೆಗಳ ಬಗ್ಗೆ ವಿಪಕ್ಷಗಳ ಬಳಿ ಸುದ್ದಿಗಳಿವೆ” ಎಂದು ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News