ಮಡಿಕೇರಿ: ಅಂತರ್ ಶಾಲಾ ಚದುರಂಗ ಸ್ಪರ್ಧೆ; ಪ್ರೌಢಶಾಲಾ ವಿಭಾಗದಲ್ಲಿ ಅಕ್ಷಯ್-ಸದ್ವಿನಿಗೆ ಪ್ರಶಸ್ತಿಯ ಗರಿ

Update: 2018-07-27 18:30 GMT

ಮಡಿಕೇರಿ, ಜು.27: ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದ ವತಿಯಿಂದ ಆಯೋಜಿತ 21ನೇ ವರ್ಷದ ಅಂತರ್ ಶಾಲಾ ಚದುರಂಗ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಸಂತ ಜೋಸೆಫರ ವಿದ್ಯಾಸಂಸ್ಥೆಯ ಅಕ್ಷಯ್ ಕೆ.ಡಿ. ಮತ್ತು ಬಾಲಕಿಯರ ವಿಭಾಗದಲ್ಲಿ  ಅದೇ ಶಾಲೆಯ ಸದ್ವಿನಿ ಗಿರೀಶ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದ ಪ್ರಬಾರ ಪ್ರಾಂಶುಪಾಲ ವನೀತ ನಂಜಪ್ಪ ಅವರು ಉದ್ಘಾಟಿಸಿದ ನಾಕ್ ಔಟ್ ಮಾದರಿಯ ಚದುರಂಗ ಸ್ಪರ್ಧೆಯಲ್ಲಿ ಒಟ್ಟು 98 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಅಕ್ಷಿತ್ ಕೆ.ಡಿ.ಪ್ರಥಮವಾದರೆ, ರಾಜೇಶ್ವರಿ ಶಾಲೆಯ ಜಿ.ಕೆ.ಪ್ರಣವ್ ದ್ವಿತೀಯ, ಕೊಡಗು ವಿದ್ಯಾಲಯದ ಎನ್.ಎಸ್.ನಿಹಾಲ್ ಅಲ್ಬರ್ಟ್ ತೃತೀಯ ಮತ್ತು ನಾಲ್ಕನೇ ಸ್ಥಾನವನ್ನು ಕೊಡಗು ವಿದ್ಯಾಲಯದ ಕೆ.ಜೆ. ನಿಶಾಂತ್ ಪಡೆದುಕೊಂಡರು.

ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸದ್ವಿನಿ ಗಿರೀಶ್ ಪ್ರಥಮ, ಎಎಲ್‍ಜಿ ಕಾನ್ವೆಂಟ್‍ನ  ಎಂ.ಎಂ.ಶಹೀರ ದ್ವಿತೀಯ, ಕೊಡಗು ವಿದ್ಯಾಲಯದ ಕೆ.ಟಿ.ಚೋಂದಮ್ಮ ತೃತೀಯ ಮತ್ತು ಕೊಡಗು ವಿದ್ಯಾಲಯದ ಎ. ಅನ್ನಪೂರ್ಣ ನಾಲ್ಕನೇ ಸ್ಥಾನ ಪಡೆದುಕೊಂಡರು.  

ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಹರ್ಷಿನಿ ಪ್ರದೀಪ್ ಪ್ರಥಮ, ಕೊಡಗು ವಿದ್ಯಾಲಯದ ನಮೃತ ಚೌದರಿ ದ್ವಿತೀಯ, ಅರಮೇರಿ ಎಸ್‍ಎಂಎಸ್ ಶಾಲೆಯ ಟಿ. ಅನಾಮಿಕ ತೃತೀಯ ಮತ್ತು ಸಂತ ಜೋಸೆಫರ ಶಾಲೆಯ ಸಾನಿಧ್ಯ ಗಿರೀಶ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆಯ ಶಿವಮ್ ಕುಮಾರ್ ಪ್ರಥಮ, ಇದೇ ಶಾಲೆಯ ದೇವಾಂಶು ದ್ವಿತೀಯ, ಕೊಡಗು ವಿದ್ಯಾಲಯದ ಕಾಶ್ಯಪ್ ನಂಜಪ್ಪ ತೃತೀಯ ಮತ್ತು ಸೈನಿಕ ಶಾಲೆಯ ಸತ್ಯಮ್ ಕುಮಾರ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News