ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ

Update: 2018-07-28 11:34 GMT

ಹಾಸನ ಜು.27: ಭಾರತ ಸರ್ಕಾರದ ವತಿಯಿಂದ ಸರ್ಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ (ಹೊಸದು/ನವೀಕರಣ)ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿವೇತನಕ್ಕೆ ಆಹ್ವಾನಿಸಲಾಗಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ(Post Matric Scholarship): ಪಿ.ಯು.ಸಿ, ಪದವಿ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ.ಯವರೆಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಆನ್‍ಲೈನ್ ಮೂಲಕ www.scholarships.gov.in ನಲ್ಲಿ ಅರ್ಜಿಯನ್ನು ಸಲ್ಲಿಸುವುದು. ಹೊಸ ಹಾಗೂ ನವೀಕೃತ ಅರ್ಜಿ ಸಲ್ಲಿಸಲು ದಿನಾಂಕ 30-09-2018 ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ರೂ 2.00 ಲಕ್ಷ ಒಳಗಿರಬೇಕು.

ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನ((Merit-Cum-Means/ Top Classes Scholarship): ತಾಂತ್ರಿಕ ಹಾಗೂ ವಿವಿಧ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್-ಕಂ-ಮೀನ್ಸ್ ಹಾಗೂ ಉನ್ನತ ಕೋರ್ಸ್ ವಿದ್ಯಾರ್ಥಿವೇತನಕ್ಕೆ ಆನ್‍ಲೈನ್ ಮೂಲಕ www.scholarships.gov.in ನಲ್ಲಿ ಅರ್ಜಿಯನ್ನು ಸಲ್ಲಿಸುವುದು.

ಹೊಸ ಹಾಗೂ ನವೀಕೃತ ಅರ್ಜಿ ಸಲ್ಲಿಸಲು ದಿನಾಂಕ 30-09-2018 ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ರೂ 2.50 ಲಕ್ಷ ಒಳಗಿರಬೇಕು. ಹಾಸನ ಜಿಲ್ಲೆ ವ್ಯಾಪ್ತಿಗೆ ಬರುವ ಕಾಲೇಜಿನ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿದ ನಂತರ ಹಾರ್ಡ್‍ಕಾಪಿಯನ್ನು ನಮೂದಿಸಿದ ದಾಖಲೆಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಿಂದ ಸಹಿ ಮಾಡಿಸಿ ಒಂದು ಪ್ರತಿಯನ್ನು ಸಂಬಂಧಿಸಿದ ಕಾಲೇಜಿಗೆ, ಒಂದು ಪ್ರತಿಯನ್ನು ಜಿಲ್ಲಾ ಮಾಹಿತಿ ಕೇಂದ್ರ, ಹಾಸನ, ಅಥವಾ ಆಯಾ ತಾಲೂಕಿನ ಮಾಹಿತಿ ಕೇಂದ್ರ ಕಚೇರಿಗೆ ಹಾಗೂ ಒಂದು ಪ್ರತಿಯು ವಿದ್ಯಾರ್ಥಿಯು ತಮ್ಮ ಬಳಿ ಇಟ್ಟುಕೊಳ್ಳುವುದು.

ಅರ್ಜಿಯ ಜೊತೆಯಲ್ಲಿ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು: ಅಂಕಪಟ್ಟಿ (ಹಿಂದಿನ ಎರಡೂ ಸೆಮಿಸ್ಟರ್/ವಾರ್ಷಿಕ ಹಾಗೂ ಹಿಂದಿನ ಕೋರ್ಸ್ ಅಂಕಪಟ್ಟಿ). ಪ್ರಸಕ್ತ ಸಾಲಿನ ಶುಲ್ಕ ಪಾವತಿಯ ರಶೀದಿ ಪ್ರತಿ. ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಸ್ವಯಂ ಘೋಷಿತ ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ (ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಜಾತಿ ನಮೂದಾಗದೇ ಇದ್ದಲ್ಲಿ) ಇಲಾಖೆಯ ಅಧಿಕೃತ ವೆಬ್‍ಸೈಟ್  http://gokdom.kar.nic.inನಲ್ಲಿ ಪಡೆಯಬಹುದು. 

ಆಧಾರ್ ಕಾರ್ಡ್ ಪ್ರತಿ. ವಿದ್ಯಾರ್ಥಿಯ ಬ್ಯಾಂಕ್ ಪಾಸ್‍ಪುಸ್ತಕದ ಪ್ರತಿ (ಐ.ಎಫ್.ಎಸ್.ಸಿ ಕೋಡ್‍ನೊಂದಿಗೆ). ವಿದ್ಯಾರ್ಥಿಯ ಪಾಸ್ ಪೋರ್ಟ್ ಸೈಜಿನ 2 ಭಾವಚಿತ್ರ. ನಿವಾಸಿ ಪ್ರಮಾಣ ಪತ್ರ (Domacile Certificate Any ID Proof). ವಿದ್ಯಾರ್ಥಿವೇತನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‍ಸೈಟ್ www.gokdom.kar.nic.in ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಕಚೇರಿ/ ಮಾಹಿತಿ ಕೇಂದ್ರ, ಮೌಲಾನ ಆಜಾದ್ ಭವನ,  ಶ್ರೀ ವಿದ್ಯಾಗಣಪತಿ ಅಡ್ಡ ರಸ್ತೆ, ಆಕಾಶವಾಣಿ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಹಾಸನ-573202 ಇವರನ್ನು ಸಂಪರ್ಕಿಸಬಹುದು ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೊದಲನೇ ಮಹಡಿ, ಹೊನ್ನಮ್ಮ ಕಾಂಪ್ಲೆಕ್ಸ್, ಬಿ.ಎಂ ರಸ್ತೆ, ಆಲೂರು ದೂ ವಾ ಸಂ: 8660432889. ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಬಾಗೂರು ರಸ್ತೆ, ಚನ್ನರಾಯಪಟ್ಟಣ – ದೂ.ಸಂ:8618953277. ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಸಿ. ನಂಜಪ್ಪ ಕಾಂಪ್ಲೆಕ್ಸ್, ಪೇಟೆ ಬೀದಿ, ಗಾಂಧಿ ಸರ್ಕಲ್ ಹತ್ತಿರ, ಹೊಳೆನರಸೀಪುರ, ದೂ.ಸಂ: 9740154327.

ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್ ಹಿಂಭಾಗ, ನೆಹರು ನಗರ, ಬೇಲೂರು. ದೂ: 08177-222086. ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಆಝಾದ್ ರಸ್ತೆ, ಸಕಲೇಶಪುರ, ದೂ: 08173-245210 /9731370798. ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ರಾಮನಾಥಪುರ ರಸ್ತೆ, ಅರಕಲಗೂಡು ಟೌನ್ ದೂ: 9741405739. ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಅರಸೀಕೆರೆ ಟೌನ್. ದೂ: 7349353200 ಇಲ್ಲಿ ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News