ದಾವಣಗೆರೆ: ಕಾಲೇಜು ಬಸ್ ಪಲ್ಟಿ; 30 ವಿದ್ಯಾರ್ಥಿಗಳಿಗೆ ಗಾಯ

Update: 2018-07-29 07:29 GMT

ದಾವಣಗೆರೆ, ಜು.29: ಟ್ಯೂಶನ್ ಮುಗಿಸಿದ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಕರೆದೊಯ್ಯುತ್ತಿದ್ದ ಕಾಲೇಜು ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಇಳಿದ ಪರಿಣಾಮ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಕಾಲನಿ(ಕೆಎಚ್‌ಬಿ ಕಾಲನಿ) ಬಳಿ ಶ್ರೀಮತಿ ಪುಷ್ಪಾ ಮಹಲಿಂಗಪ್ಪ ಕಾಲೇಜು ಬಸ್ಸು ಚಾಲಕನ ನಿಯಂತ್ರಣ ತಪ್ಪಿಹೆದ್ದಾರಿ ಪಕ್ಕದ ಗುಂಡಿಗೆ ಇಳಿದಿದೆ. ಇದರಿಂದ ಬಸ್ಸಿನಲ್ಲಿದ್ದ 30ಕ್ಕೂ ಅಧಿಕ ವಿದಾರ್ಥಿಗಳು ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

ಶ್ರೀಮತಿ ಪುಷ್ಪಾ ಮಹಲಿಂಗಪ್ಪಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು ಕುಂದುವಾಡ ಸಮೀಪದ ಕಾಲೇಜಿನಲ್ಲಿ ಟ್ಯೂಷನ್ ಮುಗಿಸಿಕೊಂಡು ರಾತ್ರಿ ದಾವಣಗೆರೆಯ ಸಿದ್ದವೀರಪ್ಪಬಡಾವಣೆಯಲ್ಲಿರುವ ಹಾಸ್ಟೆಲ್‌ಗೆ ಕಾಲೇಜು ಬಸ್ಸಿನಲ್ಲಿ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News