ಉ.ಪ್ರದೇಶ: 60 ಸಾವಿರ ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

Update: 2018-07-29 10:01 GMT

ಲಕ್ನೋ, ಜು.29: ಇಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, 60 ಸಾವಿರ ಕೋಟಿ ರೂ.ಗಳ 81 ಯೋಜನೆಗಳಿಗೆ ಚಾಲನೆ ನೀಡಿದ ರು.

ಫೆಬ್ರವರಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಈ ಯೋಜನೆಗಳನ್ನು ಉತ್ತರ ಪ್ರದೇಶಕ್ಕೆ ನೀಡಲಾಗಿತ್ತು.. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೂ ಈ ಯೋಜನೆಗಳು ಪ್ರಮುಖವಾಗಿವೆ.

ಬಿರ್ಲಾ, ರಿಲಾಯನ್ಸ್ ಹಾಗು ಅದಾನಿ ಸೇರಿದಂತೆ 8 ಪ್ರಮುಖ ಕೈಗಾರಿಕೋದ್ಯಮಿಗಳು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮತ್ತು ಕೇಂದ್ರ ಗೃಹಸಚಿವ ರಾಜ್ ನಾಥ್ ಸಿಂಗ್ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, “ಕೈಗಾರಿಕೋದ್ಯಮಿ ಗೆಳೆಯರೊಂದಿಗೆ ಇದು ತನ್ನ 2ನೆ ಸಭೆಯಾಗಿದೆ. ಫೆಬ್ರವರಿಯಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನದಲ್ಲಿ ಭೇಟಿಯಾಗಿದ್ದೆವು. 60 ಸಾವಿರ ಕೋಟಿ ರೂ. ಹೂಡಿಕೆ ಸಣ್ಣದಲ್ಲ. 2.1 ಲಕ್ಷ ನೇರ ಉದ್ಯೋಗಾವಕಾಶಗಳು ಈ ಮೂಲಕ ಸೃಷ್ಟಿಯಾಗಿದೆ. ಉತ್ತರಪ್ರದೇಶದಲ್ಲಿ ಈ ಹಿಂದೆಂದೂ ಇಷ್ಟು ತ್ವರಿತವಾಗಿ ಕೆಲಸಗಳು ನಡೆದಿರಲಿಲ್ಲ. ಡಿಜಿಟಲ್ ಇಂಡಿಯಾ ಹಾಗು ಮೇಕ್ ಇನ್ ಇಂಡಿಯಾವನ್ನು ಸರಕಾರವು ಮುಂದಕ್ಕೆ ಕರೆದೊಯ್ಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News