×
Ad

ಕೇಂದ್ರ ಸಚಿವ ಬಿಟ್ಟು ತಲೆಗೆ ಬಹುಮಾನ ಘೋಷಿಸಿದ ತೆಲಂಗಾಣ ಕಾಂಗ್ರೆಸ್ ಶಾಸಕ

Update: 2024-09-20 20:45 IST

 ರವನೀತ್‌ ಸಿಂಗ್ ಬಿಟ್ಟು(PTI) , ವೆಡ್ಮ ಬೊಜ್ಜು(PC : X \ @BojjuPatel27945)

ಹೈದರಾಬಾದ್ : ಕೇಂದ್ರ ಸಚಿವ ರವನೀತ್‌ ಸಿಂಗ್ ಬಿಟ್ಟು ಅವರ ತಲೆಯನ್ನು ತಂದೊಪ್ಪಿಸಿದವರಿಗೆ ತನ್ನ ಆಸ್ತಿಯನ್ನು ನೀಡುವುದಾಗಿ ಹೇಳಿಕೆಯ ಮೂಲಕ ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ಶಾಸಕ ವೆಡ್ಮ ಬೊಜ್ಜು ಅವರು ವಿವಾದದ ಸುಳಿಗೆ ಸಿಲುಕಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಬಿಟ್ಟು ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದ ಖಾನಾಪುರ (ಎಸ್‌ಟಿ) ಶಾಸಕ ಬೊಜ್ಜು,ಬಿಟ್ಟು ತಲೆ ಕತ್ತರಿಸುವ ಯಾರಿಗೇ ಆದರೂ ತನ್ನ ಭೂಮಿಯನ್ನು ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು.

‘ಬಿಟ್ಟು ತನ್ನ ಹೇಳಿಕೆಗಳನ್ನು ಹಿಂದೆಗೆದುಕೊಳ್ಳಬೇಕು. ಅವರು ತನ್ನ ಹೇಳಿಕೆಗಳನ್ನು ಹಿಂದೆಗೆದುಕೊಳ್ಳದಿದ್ದರೆ ಖಾನಾಪುರ ಶಾಸಕನಾಗಿ ನಾನೂ ಪ್ರಕಟಿಸುತ್ತಿದ್ದೇನೆ,ಬಿಟ್ಟು ತಲೆಯನ್ನು ತಂದೊಪ್ಪಿಸುವವರಿಗೆ ನನ್ನ ತಂದೆ ಗಳಿಸಿದ್ದ ಒಂದು ಎಕರೆ 38 ಗುಂಟೆ ಭೂಮಿಯನ್ನು ನೀಡುತ್ತೇನೆ. ಇದು ನಾವು ಹೊಂದಿರುವ ಆಸ್ತಿ’ ಎಂದು ಸುದ್ದಿವಾಹಿನಿಗಳೊಂದಿಗೆ ಮಾತನಾಡಿದ ಬೊಜ್ಜು ಹೇಳಿದ್ದರು.

ಭಾರತದಲ್ಲಿ ಸಿಕ್ಖರ ಪರಿಸ್ಥಿತಿಯ ಕುರಿತು ಹೇಳಿಕೆಗಾಗಿ ರವಿವಾರ ರಾಹುಲ್ ವಿರುದ್ಧ ದಾಳಿ ನಡೆಸಿದ್ದ ಬಿಟ್ಟು, ಬಾಂಬ್‌ಗಳನ್ನು ತಯಾರಿಸುತ್ತಿರುವವರು ಅವರನ್ನು ಬೆಂಬಲಿಸುತ್ತಿದ್ದಾರೆ. ಅವರು ದೇಶದ ನಂ.1 ಭಯೋತ್ಪಾದಕನಾಗಿದ್ದಾರೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News