×
Ad

ಜಮ್ಮುಕಾಶ್ಮೀರ:ಕಂದಕಕ್ಕುರುಳಿದ ಬಸ್, ಮೂವರು ಬಿಎಸ್‌ಎಫ್ ಸಿಬ್ಬಂದಿಗಳ ಮೃತ್ಯು

Update: 2024-09-20 21:55 IST

PC : ANI

ಶ್ರೀನಗರ : ಚುನಾವಣಾ ಕರ್ತವ್ಯಕ್ಕಾಗಿ ಬಿಎಸ್‌ಎಫ್ ಸಿಬ್ಬಂದಿಗಳನ್ನು ಸಾಗಿಸುತ್ತಿದ್ದ ಖಾಸಗಿ ಬಸ್ಸೊಂದು ಶುಕ್ರವಾರ ಜಮ್ಮು-ಕಾಶ್ಮೀರದ ಬಡ್ಗಾಮ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದು,ಕನಿಷ್ಠ ಮೂವರು ಯೋಧರು ಮೃತಪಟ್ಟಿದ್ದಾರೆ ಮತ್ತು ಇತರ ಒಂಭತ್ತು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಹಂತದ ವಿಧಾನಸಭಾ ಚುನಾವಣೆಯ ಭದ್ರತಾ ಕಾರ್ಯಕ್ಕಾಗಿ ಬಿಎಸ್‌ಎಫ್ ಯೋಧರನ್ನು ಸಾಗಿಸುತ್ತಿದ್ದ ಬಸ್ ಕಂದಕದಲ್ಲಿ ಉರುಳಿಬಿದ್ದಿದೆ. ಸುಮಾರು ಒಂದು ಡಝನ್ ಯೋಧರು ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News