ಮನೆಯಲ್ಲಿದ್ದ ಸಿಆರ್ ಪಿಎಫ್ ಯೋಧನನ್ನು ಗುಂಡಿಕ್ಕಿ ಕೊಂದ ಉಗ್ರರು

Update: 2018-07-30 08:07 GMT

ಹೊಸದಿಲ್ಲಿ, ಜು.30: ಉಗ್ರಗಾಮಿಗಳ ತಂಡವೊಂದು ಸಿಆರ್ ಪಿಎಫ್ ಯೋಧನನ್ನು ಮನೆಯಲ್ಲೇ ಗುಂಡಿಕ್ಕಿ ಕೊಂದಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ನಾಯ್ರಾ ಗ್ರಾಮದಲ್ಲಿರುವ ಸಿಆರ್ ಪಿಎಫ್ ಯೋಧ ನಾಸೀರ್ ಅಹ್ಮದ್ ಅವರ ಮನೆಗೆ ನುಗ್ಗಿದ ಉಗ್ರರ ತಂಡ ಗುಂಡಿನ ಮಳೆಗರೆದಿತ್ತು.  ಗಂಭೀರವಾಗಿ ಗಾಯಗೊಂಡಿದ್ದ ನಾಸೀರ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮೃತಪಟ್ಟರು. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಜಿಲ್ಲಾ ಸಿಆರ್ ಪಿಎಫ್ ಬೆಟಾಲಿಯನ್ ಗೆ ನಿಯೋಜಿತರಾಗಿದ್ದ ನಾಸೀರ್ ರಜೆಯ ನಿಮಿತ್ತ ಮನೆಯಲ್ಲಿದ್ದರು. ಶುಕ್ರವಾರ ಪುಲ್ವಾಮದಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಉಗ್ರರು ಅಪಹರಿಸಿದ ಒಂದೇ ದಿನದಲ್ಲಿ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News